ನವಲಗುಂದ : ಪಟ್ಟಣದಿಂದ ಅಣ್ಣಿಗೇರಿ ಕಡೆ ಸಾಗುವ ರಸ್ತೆ ಇದು, ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಭಯ ಪಡುವ ವಾತಾವರಣ ಈಗ ಇಲ್ಲಿ ಸೃಷ್ಟಿ ಆಗಿದೆ ಅಂದ್ರೂ ತಪ್ಪೇನಿಲ್ಲಾ ಬಿಡ್ರಿ, ಅದಕ್ಕೆ ಒಳ್ಳೆ ಉದಾಹರಣೆ ಅಂದ್ರೆ ಈಗ ನೀವು ನೋಡ್ತಾ ಇರುವ ದೃಶ್ಯಗಳೇ...
ಹೌದು ಈ ರಸ್ತೆ ಈ ರೀತಿ ತಗ್ಗು ದಿಣ್ಣೆಗಳಿಂದ ಕುಡಿರೋದು ಈಗಷ್ಟೆ ಅಲ್ಲಾ, ಇದು ತುಂಬಾ ದಿನಗಳಿಂದಲೇ ಇದೆ. ಆದರೆ ಈಗ ಈ ರಸ್ತೆಗಳ ಮೇಲೆ ಜಲ್ಲಿ ಕಲ್ಲು ಹಾಕಲಾಗಿದೆಯೋ ಅಥವಾ ಡಾಂಬರಿಕರಣದ ಕೆಳಗಿನ ಜಲ್ಲಿ ಕಲ್ಲೋ ತಿಳಿಯದಂತಾಗಿದೆ. ಆದರೆ ಇದರಿಂದ ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಇದೆ ಅಂದ್ರೂ ತಪ್ಪಿಲ್ಲಾ, ದ್ವಿಚಕ್ರ ವಾಹನಗಳು ಇಂತಹ ರಸ್ತೆಯಲ್ಲಿ ಸ್ಕಿಡ್ ಆಗಿ ಬೀಳುವ ಆತಂಕ ಹೆಚ್ಚಿದೆ. ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ಥಿ ಕೆಲಸಕ್ಕೆ ಮುಂದಾಗಬೇಕಿದೆ.
Kshetra Samachara
22/09/2021 09:56 pm