ನವಲಗುಂದ : ಪಟ್ಟಣದ ರೋಟರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೊಳಚೆಯಿಂದಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾದ ಹಿನ್ನೆಲೆ ಈ ಬಗ್ಗೆ ಇಂದು ಬೆಳಿಗ್ಗೆ ನಿಮ್ಮ ಪಬ್ಲಿಕ್ ನೆಕ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿಗಳಾದ ವಿರೇಶ್ ಹಸಬಿ ಅವರು ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.
ಹೌದು ಲಿಂಗರಾಜ ಶಿಕ್ಷಣ ಸಮಿತಿಯ ರೋಟರಿ ಪ್ರೌಢ ಶಾಲೆಯ ಮುಖ್ಯ ದ್ವಾರದ ಮುಂಭಾಗದಲ್ಲಿ ಕುಡುಕರ ಹಾವಳಿ, ಸಾರ್ವಜನಿಕರಿಂದ ಮೂತ್ರ, ಸ್ಥಳೀಯರಿಂದಲೂ ಇಲ್ಲಿ ಕಸ ಚಲ್ಲಲಾಗುತ್ತಿದ್ದು, ಇದರಿಂದ ಇಲ್ಲಿ ಹಂದಿಗಳ ಹಾವಳಿ ಕೂಡ ಹೆಚ್ಚಾಗಿತ್ತು. ಇದೆಲ್ಲಾ ಅಸ್ವಚ್ಛತೆಯಿಂದ ಶಾಲಾ ಮಕ್ಕಳಿಗೆ ಸಾಂಕ್ರಮಿಕ ರೋಗದ ಭಯ ಸಹ ಕಾಡ ತೊಡಗಿದೆ ಎಂದು ನಿಮ್ಮ ಪಬ್ಲಿಕ್ ನೆಕ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿ ಬಿತ್ತರವಾದ ಕೆಲವೆ ಗಂಟೆಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ನವಲಗುಂದ ಪುರಸಭೆ ಮುಖ್ಯಾಧಿಕಾರಿಗಳಾದ ವಿರೇಶ್ ಹಸಬಿ ಮತ್ತು ಅಧ್ಯಕ್ಷರಾದ ಮಂಜುನಾಥ ಜಾಧವ ಅವರು ಸ್ವಚ್ಛತೆಗೆ ಮುಂದಾಗಿ ಸ್ಥಳಕ್ಕೆ ಮಣ್ಣು ಹಾಕಿಸುವ ಕಾರ್ಯ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತ್ತಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ...
Kshetra Samachara
09/09/2021 04:24 pm