ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಹಬ್ ಮಾಡುವ ಕನಸನ್ನು ಬಿತ್ತಿ ಹೋದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯನ್ನಟ್ಟಿದ್ದಾರೆ. ಹೌದು..ಇದರ ಭಾಗವಾಗಿ ಉನ್ನತಮಟ್ಟದ ಅಧಿಕಾರಿಗಳ ಕಾರ್ಯಪಡೆ ರಚಿಸಿ ಪರಿಶೀಲನೆ, ಮಾಹಿತಿ ಸಂಗ್ರಹಕ್ಕೆ ಹುಬ್ಬಳ್ಳಿಗೆ ಕಳಿಸಿಕೊಟ್ಟಿದ್ದಾರೆ. ಇಂದು ಹುಬ್ಬಳ್ಳಿ ಧಾರವಾಡದಲ್ಲಿ ಸಭೆ ನಡಸಿದ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರ ತಂಡ ಜಿಲ್ಲಾಡಳಿತ ಹಾಗೂ ಉದ್ಯಮಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿತು.
ಈ ಭಾಗದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆ ಹಾಗೂ ಐಟಿ ಕ್ಷೇತ್ರದ ಅಭಿವೃದ್ಧಿ ಬೇಕಾದ ಮಾಹಿತಿ ನೆರವಿನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿತು. ಸಚಿವರು ಭರವಸೆ ನೀಡಿದ ತಿಂಗಳಲ್ಲೇ ಟಾಸ್‌ಕ್‌ಪೋರ್ಸ್ ಕಳುಹಿಸಿದ್ದು ಉದ್ಯಮಿಗಳಲ್ಲಿ ಸಂತಸವನ್ನುಂಟು ಮಾಡಿದೆ.
ಕೇಂದ್ರ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸಚಿವ ರಾಜೀವ ಚಂದ್ರಶೇಖರ ಕಳೆದ ತಿಂಗಳು ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಇಲ್ಲಿನ ಉದ್ಯಮಿಗಳು, ಜನತೆ, ಐಟಿ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ್ದ ಸಚಿವರು, ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲು, ಐಟಿ ಉದ್ಯಮಕ್ಕೆ ಪೂರಕವಾದ ವಾತಾವರಣ ಇಲ್ಲಿದೆ.
ಹುಬ್ಬಳ್ಳಿ- ಧಾರವಾಡವನ್ನ ಸ್ಕಿಲ್ಲಿಂಗ್ ಕ್ಯಾಪಿಟಲ್ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಐಟಿ ಉದ್ಯಮಕ್ಕೆ ಉತ್ತೇಜನಕ್ಕೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅಂದು ಭರವಸೆ ನೀಡಿ ಇಲ್ಲಿಂದ ತೆರಳಿದ್ದ ಸಚಿವರು, ಈ ಸಂಬಂಧ ತಮ್ಮ ಸಚಿವಾಲಯದ ಹಿರಿಯ ಅಧಿಕಾರಿಗಳ ಟಾಸ್ಕ್ ಪೋರ್ಸ್‌ನ್ನು ರಚಿಸಿದ್ದಾರೆ.
Kshetra Samachara
09/09/2021 03:36 pm