ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಹುಲಿಕೇರಿ ಕೆರೆಯ ತಡೆಗೋಡೆ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ; ಮೀನವೇಶ ಎಣಿಸುತ್ತಿರುವ ಜನಪ್ರತಿನಿಧಿಗಳು.

ಅಳ್ನಾವರ: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಗೆ ತಾಲೂಕಿನ ಜನರೆಲ್ಲರೂ ಅಕ್ಷರಶಃ ನಲುಗಿ ಹೋಗಿದ್ದಾರೆ.ಬೆಳೆ ಕೊಡುವ ಭೂಮಿ ಹಾಳಾಗಿದ್ದೆಷ್ಟೋ, ಹೊಲದಲ್ಲಿರುವ ಮೋಟರ್ ತೇಲಿಹೋಗಿದ್ದೆಷ್ಟೋ. ಸೂರು ಕಳೆದುಕೊಂಡು ಪರದಾಡಿದವರೆಷ್ಟೋ.ಇವತ್ತಿನ ವರೆಗೂ ಅವರೆಲ್ಲರ ಬದುಕು ಸುಸ್ಥಿತಿಗೆ ಮರಳದೆ,ಅತಂತ್ರ ವಾಗಿಯೇ ಉಳಿದಿದೆ.

ಅಳ್ನಾವರ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜನರ ಜೀವನಾಡಿ ಹುಲಿಕೇರಿಯ 'ಇಂದಿರಮ್ಮನ ಕೆರೆ'.ಸರಿ ಸುಮಾರು 132 ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶವಿರುವ ಈ ಕೆರೆ ಹುಲಿಕೇರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಜನರಿಗೆ ಕುಡಿಯುವ ನೀರಿನ ಜೊತೆಗೆ ಸುಮಾರು ಹದಿನೈದು ಸಾವಿರ ಎಕರೆ ಗಿಂತಲೂ ಅಧಿಕ ಹೊಲ,ಗದ್ದೆ ಗಳಿಗೆ ನೀರುಣಿಸುವ ಮಹಾ ತಾಯಿ.ಇದನ್ನ ನಂಬಿ ಬದುಕು ಕಟ್ಟಿ ಕೊಂಡವರ ಸಂಖ್ಯೆ ಬಹಳಷ್ಟಿದೆ.

ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದಾಗಿ ಹುಲಿಕೇರಿ ಕೆರೆ ಯ ತಡೆ ಗೋಡೆ ಒಡೆದು ಕೆರೆಯಲ್ಲಿ ಸಂಗ್ರಹ ವಾಗಬೇಕಿದ್ದ ನೀರು ಸಂಪೂರ್ಣವಾಗಿ ಪೋಲಾಗಿ ಹೋಗಿದೆ.ಕೆರೆಯಲ್ಲಿ ದನ ಕರಗಳಿಗೆ ಕುಡಿಯುವ ನೀರು ಸಹ ಇಲ್ಲ.ಇನ್ನೂ ಮಳೆಗಾಲ ಇರುವಾಗಲೇ ಈ ಗತಿ ಬಂದಿದೆ ಎಂದರೆ ಇನ್ನು ವರ್ಷಾನು ಪೂರ್ತಿ ಹೇಗೆ ಎನ್ನುವದು ಯಕ್ಷ ಪ್ರಶ್ನೆ ಯಾಗಿದೆ.

ರಾಜಕಾರಣಿಗಳ ವೀಕ್ಷಣೆ ಬರಿ ನೆಪ ಮಾತ್ರ ವಾಗಬರದು.ಕಾರ್ಯ ರೂಪಕ್ಕೂ ಬರಬೇಕು.ಅವರ ಮಾತು ಓಟು ಕಬಳಿಸುವ ಭಾಷಣ ವಾಗಬರದು,ಜನರ ಕಷ್ಟ ನೋವುಗಳಿಗೆ ಸ್ಪಂದಿಸುವ ಭರವಸೆಯ ದಾರಿ ದೀಪವಾಗಬೇಕು. ಆದಷ್ಟು ಬೇಗನೆ ಕೆರೆ ಪುನರ್ ನಿರ್ಮಾಣ ಮಾಡಿ ಕೆರೆಗೆ ಚೆಕ್ ಡ್ಯಾಮ್ ನಿರ್ಮಿಸಬೇಕು.ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು.ಜನರ ಬದುಕಿನ ಜೊತೆಗೆ ಆಟ ವಾಡುವುದನ್ನು ಬಿಟ್ಟು ಅವರಿಗೆ ಬದುಕಲು ಆಸರೆ ಯಾಗಬೇಕಾಗಿದೆ.

ಮಹಾಂತೇಶ ಪಠಾಣಿ,

ಪಬ್ಲಿಕ್ ನೆಕ್ಷ್ಟ್ ಅಳ್ನಾವರ

Edited By : Manjunath H D
Kshetra Samachara

Kshetra Samachara

28/08/2021 01:20 pm

Cinque Terre

19.53 K

Cinque Terre

0

ಸಂಬಂಧಿತ ಸುದ್ದಿ