ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ - ಇದು ನೂತನ ಸಿಎಂ ಬಸವರಾಜ ಬೊಮ್ಮಾಯಿ ತವರೂರು. ಈ ಹಿಂದೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದ ಊರು. ಆದ್ರೂ ಈ ಊರಿನ ರಸ್ತೆಗಳಲ್ಲಿ ಕಾಲಿಡೋಕ್ಕೆ ಆಗಲ್ಲ ಬಿಡ್ರೀ... ಅಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳು ಹದಗೆಟ್ಟಿವೆ. ಬೇರೆ ಕಡೆಯಿಂದ ಬಂದವರು ಬೈದು ಹೋಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ಸದ್ಯದ ಸ್ಥಿತಿಯಾಗಿದೆ. ಹುಬ್ಬಳ್ಳಿ ಮಹಾನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ರಾಡಿ ರಾಡಿ ನಿಮ್ಮ ಕಣ್ಣಿಗೆ ಕಾಣಸಿಗುತ್ತದೆ. ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಅನ್ನೋ ಅನುಮಾನ ವಾಗಿದೆ. ಇದರಿಂದ ಹುಬ್ಬಳ್ಳಿ ಜನರು ಜನ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ರಸ್ತೆಗಳಲ್ಲಿ ವಾಹನ ಸಂಚಾರ ಮಾಡೋದಂದ್ರೆ ದೊಡ್ಡ ಸರ್ಕಸ್ ಅನ್ನೋ ಸ್ಥಿತಿ ಇದೆ. ಪಾದಚಾರಿಗಳಿಂಗೆ ರಸ್ತೆಗಳಲ್ಲಿ ಓಡಾಡೋದೆ ದೊಡ್ಡ ಕಷ್ಟವಾಗಿದೆ. ಬೇರೆ ಬೇರೆ ಊರುಗಳಿಂದ ವಸ್ತುಗಳ ಖರೀದಿಗೆ ಬಂದವರು ರಸ್ತೆಗಳನ್ನು ನೋಡಿ ವಾಕರಿಕೆ ಮಾಡಿಕೊಳ್ಳೊ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ದುಸ್ಥಿತಿಯನ್ನು ನೋಡಿ ಹುಬ್ಬಳ್ಳಿಯ ಸಹವಾಸವೇ ಬೇಡ ಅಂತಿದಾರೆ ಪರ ಊರಿನಿಂದ ಬಂದ ಜನ
ಇನ್ನೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ – ಧಾರವಾಡ ಕೇಂದ್ರ ಕ್ಷೇತ್ರದ ಪ್ರತಿನಿಧಿಯಾಗಿದ್ದು, ಮೊನ್ನೆಯವರೆಗೂ ಅವರೇ ಜಿಲ್ಲಾ ಉಸ್ತುವಾರಿಗಳೂ ಆಗಿದ್ರು. ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಇದೇ ಊರಿನವರು, ಅಷ್ಟೇ ಅಲ್ಲದೆ ಈಗ ಇದೇ ಊರಿನಲ್ಲಿ ಬೆಳೆದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಯಾರೇ ಅಧಿಕಾರಕ್ಕೆ ಬಂದ್ರೂ ವಾಣಿಜ್ಯ ನಗರಕ್ಕೆ ಏನೂ ಮಾಡಿಲ್ಲ. ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸಲೂ ಆಗಲ್ಲವೆಂದರೆ ಸಿಎಂ ಆದ್ರೂ ಏನು ಪ್ರಯೋಜನೆ ಅನ್ನೋ ಪ್ರಶ್ನೆ ಜನತೆಯದ್ದಾಗಿದೆ. ನೂತನ ಸಿಎಂ ಬೊಮ್ಮಾಯಿ ಅವರಿಂದಲಾದ್ರೂ ರಸ್ತೆಗಳು ಸುಧಾರಿಸುತ್ತವೆಯಾ ಎಂದು ಹುಬ್ಬಳ್ಳಿಗರು ಪ್ರಶ್ನೆ ಮಾಡುತ್ತಿದ್ದಾರೆ.....
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,,,,,,
Kshetra Samachara
25/08/2021 02:47 pm