ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಒತ್ತು! ಆತಂಕದಲ್ಲಿ ಸಾರ್ವಜನಿಕರು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಡುವೆ ಸಂಪರ್ಕ ಕೊಂಡಿಯಾಗಿ, ತ್ವರಿತಚಾಗಿ ಬಸ್ ಸಂಚಾರ ಕಲ್ಪಿಸುವ ಬಿಆರ್ ಟಿಎಸ್ ಯೋಜನೆಯಡಿ, ನೂರಾರು ಬಸ್ ಗಳು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದು ಲಕ್ಷಾಂತರ ನಷ್ಟ ಅನುಭವಿಸುತ್ತಿದೆ. 18 ವರ್ಷಗಳಿಂದ ಇರುವ ಬೇಂದ್ರೆ ಸಾರಿಗೆ ಇದಕ್ಕೆ ಪೈಪೋಟಿ ನಡೆಸುತ್ತಿರುವುದರಿಂದ ನಷ್ಟ ಸಂಭವಿಸುತ್ತಿದೆ. ಇದೆ ಕಾರಣಕ್ಕೆ ಬೇಂದ್ರೆ ಸಾರಿಗೆಗೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

2019ರ ಕರಡು ಅಧಿಸೂಚನೆ ಪ್ರಕಾರ, ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್‌ ರಹದಾರಿ ಪರವಾನಗಿ ನವೀಕರಣ ಮಾಡಿರಲಿಲ್ಲ. ಇದೀಗ ಸರಕಾರ ಬೇಂದ್ರೆ ಸಾರಿಗೆಗೆ ಪರ್ಯಾಯ ಮಾರ್ಗಗಳನ್ನು ನೀಡಿದ್ದು, ಅಂದುಕೊಂಡಂತೆ ಬೇರೆಡೆಗೆ ಸ್ಥಳಾಂತರಗೊಂಡರೆ, ಬಿಆರ್‌ಟಿಎಸ್‌ ಮಿಶ್ರಪಥ ಸಾರಿಗೆ ಸುಗಮವಾಗಲಿದೆ. ನಷ್ಟದಲ್ಲಿರುವ ಸಾರಿಗೆ ಲಾಭದತ್ತ ಬರುವ ನಿರೀಕ್ಷೆ ಮಾಡಲಾಗಿದೆ. ಆದರೆ ಸರಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಬೇಂದ್ರೆ ಸಾರಿಗೆಯ 41 ರಹದಾರಿ ಪರವಾನಗಿಗಳನ್ನು ಹುಬ್ಬಳ್ಳಿ-ಗದಗ 11, ಹುಬ್ಬಳ್ಳಿ-ಬಾಗಲಕೋಟೆ-ವಿಜಯಪುರ 15, ಬೆಳಗಾವಿ-ಅಥಣಿ-ವಿಜಯಪುರ 15, ಹಂಚಿಕೆ ಮಾಡಿ ರಾಜ್ಯ ಸಾರಿಗೆ ಪ್ರಾಧಿಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಆರ್‌ಟಿಎಸ್‌ ರೂವಾರಿ ಜಗದೀಶ ಶೆಟ್ಟರ ನೇತೃತ್ವದಲ್ಲಿ ವಿಚಾರಣಾ ಪ್ರಾಧಿಕಾರ ರಚಿಸಿ, ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಯ ಮನವಿ ಆಲಿಸಿದ್ದರು.

ಇದೀಗ ಸರಕಾರದ ಅಧಿಸೂಚನೆ ಪ್ರಕಾರ 18 ವರ್ಷಗಳ ಕಾಲ ಮಹಾನಗರದಲ್ಲಿ ಸಾರಿಗೆ ಸೇವೆ ನೀಡಿದ್ದ ಬೇಂದ್ರೆ ಸಾರಿಗೆ ಸ್ಥಗಿತಗೊಳ್ಳಲಿದೆ. ಆದ್ರೆ ಲಾಭದ ಮಾರ್ಗಗಳ ವಿತರಣೆ ಮಾಡಲಾಗಿದೆ ಎನ್ನಯವ ಆರೋಪ ಕೇಳಿ ಬರುತ್ತಿದೆ. ಆದಷ್ಟು ಬೇಗ ಇದಕ್ಕೊಂದು ಮಾರ್ಗ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಧಾರವಾಡ ಜನರು ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

10/08/2021 03:40 pm

Cinque Terre

18.16 K

Cinque Terre

8

ಸಂಬಂಧಿತ ಸುದ್ದಿ