ಕಲಘಟಗಿ: ಕಲಘಟಗಿಯಿಂದ ಮುತ್ತಗಿ ವಾಯ್ಹಾ ಧಾರವಾಡ ಬಸ್ ಮೊದಲಿನ ಶಡ್ಯೂಲ್ ಗಳಲ್ಲಿ ಓಡಿಸದೇ ಇರುವುದರಿಂದ ಜನರು ಕೊರೊನಾ ಭಯದ ನಡುವೆ ಸಂಚರಿಸುವಂತಾಗಿದೆ.
ಕಲಘಟಗಿ-ಮುತ್ತಗಿ,ಧಾರವಾಡ ಬಸ್ ನಿಗದಿತವಾದ ಶಡ್ಯೂಲ್ ಗಳಲ್ಲಿ ಸಂಚರಿಸದೇ ಇರವುದರಿಂದ ಗ್ರಾಮೀಣ ಜನರು ಬಸ್ ಗಾಗಿ ಪರದಾಡುವಂತಾಗಿದೆ.ಕಲಘಟಗಿಯಿಂದ ವಾಯ್ಹಾ ಮುತ್ತಗಿ ಮಾರ್ಗವಾಗಿ ಸಂಚರಿಸುವ ಬಸ್ ಲಾಕ್ ಡೌನ್ ನಂತರ ನಿಗದಿತವಾದ ಸಮಯದಲ್ಲಿ ಸಂಚರಿಸುತ್ತಿಲ್ಲ ಇದರಿಂದ ಇದ್ದ ಬಸ್ ಗಳಲ್ಲಿಯೇ ಜನದಟ್ಟಣೆ ಹೆಚ್ಚಾಗಿದೆ.ವಿದ್ಯಾರ್ಥಿಗಳ ಬಸ್ ಗಳಿಗೆ ಜೋತು ಬಿದ್ದು
ಪ್ರಯಾಣಿಸುತ್ತಿದ್ದು,ಅಪಘಾತ ಭಯ ಉಂಟಾಗುವ ಸಂಭವ ಇದೆ.
ಗ್ರಾಮೀಣ ಭಾಗದ ಜನರು ಧಾರವಾಡಕ್ಕೆ ಆಸ್ಪತ್ರೆಗಳಿಗೆ,ಕಾಲೇಜುಗಳಿಗೆ,ಉದ್ಯೋಗಕ್ಕಾಗಿ, ಧಾರವಾಡದ ಮಾರುಕಟ್ಟೆಗೆ,ತಾರೀಹಾಳ,ಟಾಟಾ ಮಾರ್ಕೊ ಪೋಲೋ ಕೈಗಾರಿಕೆಗಳಿಗೆ ಕೆಲಸಕ್ಕೆ ಹೋಗುವ ಹಾಗೂ ಧಾರವಾಡಕ್ಕೆ ಹೋಗುವ ಕೂಲಿ ಕಾರ್ಮಿಕರು,ಬಡ ರೈತರ,ಕೂಲಿ ಕಾರ್ಮಿಕರು, ಧಾರವಾಡ ಸಿವಿಲ್ ಆಸ್ಪತ್ರೆಗೆ,ಎಸ್ ಡಿ ಎಂ ಸಿ ಆಸ್ಪತ್ರೆಗೆ ಹೋಗುವ ರೋಗಿಗಳು,ನೌಕರರು, ಎಲ್ಲಾ ವರ್ಗದ ಜನ ಈ ಮಾರ್ಗದಲ್ಲಿ ಹೋಗುತ್ತಾರೆ.ಆದರೆ ಬಸ್ ಗಳು ನಿಗದಿತ ಸಂಖ್ಯೆಯಲ್ಲಿ ಸಂಚಾರವಿಲ್ಲದೇ ಜನರು ಹೈರಾಣಾಗಿದ್ದು,ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಹಾದಿ ಹಿಡಿದರು ಅಚ್ಚರಿ ಪಡಬೇಕಿಲ್ಲ.
ಇನ್ನಾದರು ಬಸ್ ಘಟಕದ ಅಧಿಕಾರಿಗಳು ಕಲಘಟಗಿ ಮುತ್ತಗಿ ಮಾರ್ಗದ ಧಾರವಾಡ ಬಸ್ ಹಳೆಯ ಶಡ್ಯೂಲ್ ಪ್ರಕಾರ ನಿಗದಿತವಾಗಿ ಸಂಚಾರಿಸಲು ವ್ಯವಸ್ಥೆ ಮಾಡ ಬೇಕಿದೆ.
Kshetra Samachara
09/08/2021 12:54 pm