ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಾಕ್ ಡೌನ್ ಮುಗಿದು ಅನ್ ಲಾಕ್ ಆದ್ರೂ ಇನ್ನೂ ಸ್ಟಾರ್ಟ್ ಆಗಿಲ್ಲ ಕೆಲಸ: ಇನ್ನೂ ಯಾವಾಗ್ರಿ ಮುಹೂರ್ತ

ಹುಬ್ಬಳ್ಳಿ: ಅದು ಹುಬ್ಬಳ್ಳಿ ಧಾರವಾಡ ಜನರ ಕನಸಿನ ಯೋಜನೆ.‌ ಸುಮಾರು 298 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆ ಯೋಜನೆಯ ಭೂಮಿ ಪೂಜೆ ನೆರವೇರಿ ಎಂಟು ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಆ ಬಹುಕೋಟಿಯ ಯೋಜನೆಯ ಕಾಮಗಾರಿ ಮಾತ್ರ ಆರಂಭವಾಗಿಲ್ಲ.‌ಯಾವುದು ಆ ಯೋಜನೆ ಅಂತಾ ಹೇಳ್ತೀವಿ ನೋಡಿ.

ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಯ ಕನಸಿನ ಯೋಜನೆ ಬಹುಕೋಟಿಯ ಫ್ಲೈ ಓವರ್ ಯೋಜನೆ. ಸರಿಸುಮಾರು 298 ಕೋಟಿ ವೆಚ್ಚದಲ್ಲಿ ರೂಪಿಸರುವ ಈ ಯೋಜನೆಯ ಸಾಂಕೇತಿಕ ಭೂಮಿ ಪೂಜೆಯನ್ನು ಕಳೆದ ಜನವರಿ ತಿಂಗಳಿನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ನೆರವೇರಿಸಲಾಗಿತ್ತು. ಭೂಮಿ‌ ಪೂಜೆ‌ ನಂತರ ಶೀಘ್ರದಲ್ಲೇ ಈ ಯೋಜನೆಯ ಕಾಮಗಾರಿ ಆರಂಭಿಸುವ ದೃಷ್ಠಿಯಿಂದ ಡಿ.ಪಿ.ಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೂ ಸಲ್ಲಿಸಲಾಗಿತ್ತು. ಅದಾಗ್ಯೂ ಎಂಟು ತಿಂಗಳು ಕಳೆದರೂ ಇದುವರೆಗೂ ಫ್ಲೈ ಓವರ್ ಯೋಜನೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಇನ್ನೂ ಈ ಯೋಜನೆಯ ಕಾಮಗಾರಿಗೆ ಕೆಲ ತಾಂತ್ರಿಕ ಅಡೆತಡೆಗಳು ಎದುರಾಗಿದ್ದು, ಆ ಅಡೆತಡೆಗಳಿಂದಲೇ ಕಾಮಗಾರಿ ವಿಳಂಬವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ದಟ್ಟವಾಗಿ ಕಾಡುತ್ತಿವೆ.

ನಗರದ ಚೆನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್‌ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್‌ ಯೋಜನೆ ಇದಾಗಿದ್ದು, ಮೂರು ಹಂತದ ಈ ಯೋಜನೆಗೆ 1,242 ಕೋಟಿ ವೆಚ್ಚದ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಯ ಪ್ರಸ್ತಾವಕ್ಕೆ ಒಪ್ಪಿಗೆ ಕೂಡ ದೊರೆತಿದೆ. ಅಲ್ಲದೇ ಯೋಜನೆಯ ಕಾಮಗಾರಿಗೂ ಮುನ್ನ ಮಣ್ಣು ಪರೀಕ್ಷೆಯನ್ನೂ ಸಹ ಮಾಡುವ ಮೂಲಕ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರೂ ಇದುವರೆಗೂ ಕಾಮಗಾರಿ ಮಾತ್ರ ಆರಂಭಿಸದೇ ಇರುವುದು ಹಲವಾರು ಅನುಮಾನ ಎಡೆಮಾಡಿಕೊಟ್ಟಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕೆಲ ಕಾಮಗಾರಿಗಳಿಂದಾಗಿ ಈಗಾಗಲೇ ಬೇಸತ್ತಿರೋ ಹು-ಧಾ ಅವಳಿನಗರದ ಜನತೆ ಶೀಘ್ರವೇ ಫ್ಲೈ ಓವರ್ ಯೋಜನೆಯ ಕಾಮಗಾರಿ ಶೀಘ್ರವೇ ಆರಂಭಿಸಬೇಕು ಎಂದು ಆಗ್ರಹಪಡಿಸುತ್ತಿದ್ದಾರೆ.

ಒಟ್ಟಾರೆ ಅವಳಿನಗರದ ಜನತೆಯ ಕನಸಾಗಿರುವ ಬಹುಕೋಟಿ ವೆಚ್ಚದಲ್ಲಿ ರೂಪಿಸಲಾಗಿರುವ ಫ್ಲೈ ಓವರ್ ಯೋಜನೆಗೆ ಉಂಟಾಗಿರೋ ಅಡೆತಡೆಗಳು ಶೀಘ್ರವೇ ಬಗೆಹರಿದು ಯೋಜನೆಯ ಕಾಮಗಾರಿ ಶೀಘ್ರವೇ ಆರಂಭಿಸೋ ಮೂಲಕ ಅವಳಿನಗರದ ಜನತೆಗೆ ಉಂಟಾಗುವ ಸಮಸ್ಯೆಯನ್ನು ಬಗೆಹರಿಸಲಿ ಅನ್ನೋದು ನಮ್ಮ ಆಶಯ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!

Edited By : Shivu K
Kshetra Samachara

Kshetra Samachara

07/08/2021 05:10 pm

Cinque Terre

87.21 K

Cinque Terre

8

ಸಂಬಂಧಿತ ಸುದ್ದಿ