ಕುಂದಗೋಳ : ಪಟ್ಟಣದ ಮೂರನೇ ವಾರ್ಡ್ ಮಾನಪ್ಪನ ಪ್ಲಾಟಿನ ಶುದ್ಧ ನೀರಿನ ಘಟಕ ಹಾಗೂ ಸ್ತ್ರೀ ಶಕ್ತಿ ಭವನದ ಮುಂಭಾಗದಲ್ಲಿ ಕೊಳಚೆ ಕಸ ಸಂಗ್ರಹವಾದ ಪರಿಣಾಮ ಸ್ಥಳೀಯರಿಗೆ ಕಾಡುತ್ತಿದ್ದ ದುರ್ನಾತ ಹಾಗೂ ಸೊಳ್ಳೆ ಹಂದಿಗಳ ತಾಪತ್ರಯದ ಬಗ್ಗೆ ಪಬ್ಲಿಕ್ ನೆಕ್ಸ್ಟ್ "ಮಾನಪ್ಪನ ಪ್ಲಾಟ್ ನಿವಾಸಿಗಳ ಗೋಳು ನಿತ್ಯ ಗಬ್ಬು ವಾಸನೆ ತಲೆನೋವು" ಎಂಬ ಶಿರ್ಷಿಕೆ ಅಡಿಯಲ್ಲಿ ಶನಿವಾರ ವರದಿ ಬಿತ್ತರಿಸಿತ್ತು.
ಈ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ತ್ರಿ ಶಕ್ತಿ ಭವನದ ಮುಂದೆ ಸಂಗ್ರಹವಾಗಿದ್ದ ಕೊಳಚೆ ರಾಡಿ ಕಸವನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಚತೆ ಮಾಡಿದ್ದು ನಿತ್ಯ ಬೆಳಿಗ್ಗೆ ಮಾನಪ್ಪನ ಪ್ಲಾಟ್ ನಿವಾಸಿಗಳು ಮನೆ ಮನೆ ಕಸ ಕೊಂಡ್ಯೊಯಲು ಹೆಚ್ಚಿನ ವಾಹನದ ವ್ಯವಸ್ಥೆ ಕಲ್ಪಿಸಿ ಶುದ್ಧ ನೀರಿನ ಘಟಕ ಸುತ್ತಲೂ ನೈರ್ಮಲ್ಯ ವಾತಾವರಣ ಕಲ್ಪಿಸಿದ್ದಾರೆ.
ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಗೊಂಡ ಮರುದಿನವೇ ಮಾನಪ್ಪನ ಪ್ಲಾಟ್ ನಿವಾಸಿಗಳ ಗೋಳು ಇತ್ಯರ್ಥವಾಗಿದ್ದು, ಸಧ್ಯ ನೀರು ತುಂಬಿ ಜಲಾವೃತವಾಗಿರುವ ಕಸವನ್ನು ಮಳೆ ಕಡಿಮೆಯಾದ ಬಳಿಕ ನಿರ್ವಹಣೆ ಮಾಡುವ ಭರವಸೆಯನ್ನು ಸಹ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಶ್ರೀಧರ ಪೂಜಾರ
Kshetra Samachara
02/08/2021 12:51 pm