ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ನಿತ್ಯ ವಿಮಾನ ಸಂಚಾರ ಆರಂಭ

ಹುಬ್ಬಳ್ಳಿ: ಆಗಸ್ಟ್ 1ರಿಂದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ವಿಮಾನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಕೋವಿಡ್ ಲಾಕ್‌ಡೌನ್ ಮುಗಿದ ಬಳಿಕ ವಿವಿಧ ನಗರಗಳಿಗೆ ವಿಮಾನ ಸಂಪರ್ಕವನ್ನು ಇಂಡಿಗೂ ಏರ್‌ಲೈನ್ಸ್ ಆರಂಭಿಸುತ್ತಿದೆ. ಮುಂಬೈ, ಚೆನ್ನೈ, ಗೋವಾ, ಬೆಂಗಳೂರು, ಕೊಚ್ಚಿನ್, ಮತ್ತು ಕಣ್ಣೂರಿಗೆ ವಿಮಾನಗಳು ಹಾರಾಟ ನಡೆಸಲಿವೆ.

ಚೆನ್ನೈನಿಂದ ಬೆಳಗ್ಗೆ 6.05ಕ್ಕೆ ಹೊರಡುವ ವಿಮಾನ ಹುಬ್ಬಳ್ಳಿಗೆ 8.10ಕ್ಕೆ ಆಗಮಿಸಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 8.35ಕ್ಕೆ ಹೊರಡುವ ವಿಮಾನ ಕೊಚ್ಚಿನ್‌ಗೆ 10.20ಕ್ಕೆ ತಲುಪಲಿದೆ. ಕೊಚ್ಚಿನ್‌ನಿಂದ 10.50ಕ್ಕೆ ಹೊರಟು, 12.40ಕ್ಕೆ ಹುಬ್ಬಳ್ಳಿಗೆ ವಾಪಸ್ ಆಗಲಿದೆ.

Edited By : Nagaraj Tulugeri
Kshetra Samachara

Kshetra Samachara

30/07/2021 08:46 pm

Cinque Terre

55.9 K

Cinque Terre

27

ಸಂಬಂಧಿತ ಸುದ್ದಿ