ಕುಂದಗೋಳ : ತಾಲೂಕಿನ ಏಳು ಹಳ್ಳಿಗಳ ಸಾರ್ವಜನಿಕರು ಸಾರಿಗೆ ಬಸ್ಸ್ ಏರಿ ಸಿಟಿ ತಲುಪೋಕೆ ಆಗ್ತಿಲ್ಲಾ, ಕಾಲೇಜು ಆರಂಭವಾದ್ರೂ ಈ ಹಳ್ಳಿಗರ ಮಕ್ಕಳಿಗೆ ಬಸ್ಸ ಏರಿ ಪ್ರಮಾಣ ಆರಂಭಿಸುವ ಭಾಗ್ಯ ದೊರೆತಿಲ್ಲ.
ಇಂತಹ ತಾಪತ್ರಯಕ್ಕೆ ಸಿಲುಕಿದವರೇ ಬೃಹತ್ ಹೋಬಳಿ ಗ್ರಾಮ ಸಂಶಿ, ಪಶುಪತಿಹಾಳ, ಚಾಕಲಬ್ಬಿ, ಹಿರೇಗುಂಜಳ, ಚಿಕ್ಕಗುಂಜಳ, ಹೊಸಳ್ಳಿ, ಯರೇಬೂದಿಹಾಳದ ಜನತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನೆಲಕ್ಕಪ್ಪಳಿಸಿದ ದಿನದಿಂದ ಇಲ್ಲಿಯವರೆಗೆ ಈ ಗ್ರಾಮಗಳಿಗೆ ಸಾರಿಗೆ ಬಸ್ ತಲುಪಿಲ್ಲ.
ಸಾರಿಗೆ ಬಸ್ಸ್ ಸಂಚಾರ ಆರಂಭವಿದ್ದಾಗ ಬಸ್ಸ್ ಏರಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈದೀಗ ತಮ್ಮ ಮನೆ ದ್ವಿಚಕ್ರ ವಾಹನಗಳೇ ಆಧಾರ. ಯಾವಾಗ ಕಾಲೇಜು ಬಿಡತ್ತೋ, ಯಾವಾಗ ಆರಂಭವಾಗತ್ತೋ, ಪಾಲಕರೇ ಕುಂದಗೋಳಕ್ಕೆ ಬಿಡುವುದು ಮರಳಿ ಕರೆದುಕೊಂಡು ಬರುವುದು ಖಾಯಂ ಆಗಿದೆ.
ಈ ಏಳು ಹಳ್ಳಿಗಳಿಗೆ ಸಾರಿಗೆ ಬಸ್ಸ್ ಸಂಚಾರ ಸ್ಥಗಿತವಾದ ಪರಿಣಾಮ ಕೇವಲ ವಿದ್ಯಾರ್ಥಿ ಸಾರ್ವಜನಿಕರಿಗೆ ಸಂಕಷ್ಟವಲ್ಲದೆ, ಸಾರಿಗೆ ನಿರ್ವಾಹಕರೇ ಹೇಳೋ ಪೈಕಿ ಸಾರಿಗೆ ಸಂಸ್ಥೆಗೆ ನಿತ್ಯ 1 ಲಕ್ಷ ರೂಪಾಯಿ ಆದಾಯ ಖೊತಾ ಹೊಡೆಯುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ಶೀಘ್ರ ಬ್ರಿಡ್ಜ್ ದುರಸ್ತಿ ಮಾಡ್ಸಿದ್ರೇ ಜನತೆ ವಿದ್ಯಾರ್ಥಿಗಳ ಸಮಸ್ಯೆ ದೂರವಾಗಿ ಸಾರಿಗೆ ಸಂಸ್ಥೆಗೂ ಲಾಭ ಬರುತ್ತೆ.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
29/07/2021 04:13 pm