ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತೀರ್ಥ ಗ್ರಾಮಕ್ಕೆ ಜಿಪಂ ಸಿಇಒ ಭೇಟಿ ಕಾಮಗಾರಿ ಪರಿಶೀಲನೆ

ಕುಂದಗೋಳ : ತಾಲೂಕಿನ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀರ್ಥ ಗ್ರಾಮಕ್ಕೆ ಭೇಟಿ ಇತ್ತೀಚೆಗೆ ಬೇಟಿ ನೀಡಿದ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸುಶೀಲಾ ಅವರು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ತೀರ್ಥ ಗ್ರಾಮದ ಶುದ್ಧ ನೀರಿನ ಘಟಕ ಹಾಗೂ ಗ್ರಾಮಕ್ಕೆ ನೀರನ್ನು ಒದಗಿಸುವ ಟ್ಯಾಂಕರ್ ನಿರ್ವಹಣೆ ಪೈಪ್ ಲೈನ್ ಕಾಮಗಾರಿ ಪರಿಶೀಲನೆ ನಡೆಸಿ ತಾಲೂಕು ಪಂಚಾಯಿತಿ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಅಜಯ್.ಎನ್ ಅವರ ನೇತೃತ್ವದಲ್ಲಿ ಗ್ರಾಮಸ್ಥರನ್ನು ಕರೆದು ಅಲ್ಲಿನ ಪರಿಸ್ಥಿತಿ ಮೂಲ ಸೌಕರ್ಯಗಳ ಬಗ್ಗೆ ಪ್ರಶ್ನೆ ಮಾಡಿದರು.

ತೀರ್ಥ ಗ್ರಾಮದ ರಸ್ತೆ ಸೇರಿದಂತೆ ಪಂಚಾಯಿತಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿ ಪೂರಕ ಮಾಹಿತಿಯನ್ನು ಪಿಡಿಒ ನಾಗರಾಜ ಉಳ್ಳೇಸೂರ ಅವರಿಂದ ಪಡೆದರು.

ಈ ಸಂದರ್ಭದಲ್ಲಿ ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದು ತಮ್ಮೂರಿಗೆ ಬೇಕಾದ ಮೂಲ ಹೆಚ್ಚಿನ ಸೌಕರ್ಯಗಳ ಬಗ್ಗೆ ಮನವಿ ಮಾಡಿದರು.

Edited By : Nirmala Aralikatti
Kshetra Samachara

Kshetra Samachara

16/02/2021 12:00 pm

Cinque Terre

20.29 K

Cinque Terre

0

ಸಂಬಂಧಿತ ಸುದ್ದಿ