ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:2 ಕೋಟಿ 40 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ ಎಂ ನಿಂಬಣ್ಣವರ ವಿದ್ಯುಕ್ತ ಚಾಲನೆ

ಕಲಘಟಗಿ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಸಿ ಎಂ ನಿಂಬಣ್ಣವರ ಅಂದಾಜು 2 ಕೋಟಿ 40 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲೂಕಿನ ಬಮ್ಮಿಗಟ್ಟಿ, ದ್ಯಾವನಕೊಂಡ,ಹುಣಸಿಕಟ್ಟಿ, ತಬಕದಹೊನ್ನಳ್ಳಿ, ನಾಗನೂರ,ಗಂಜೀಗಟ್ಟಿ, ಭೋಗೆನಾಗರಕೊಪ್ಪ, ಹಿಂಡಸಗೇರಿ, ಮಡಕಿಹೊನ್ನಳ್ಳಿ,ದಾಸ್ತಿಕೊಪ್ಪ, ದುಮ್ಮವಾಡ,ದಾಸನೂರ,ಜಿ.ಬಸನಕೊಪ್ಪ, ಎಮ್ಮೆಟ್ಟಿ,ಬಿ.ಶೀಗಿಗಟ್ಟಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ ಹಾಗೂ ಎಸ್ ಸಿ‌ ಪಿ ಹಾಗೂ ಟಿ ಎಸ್ ಪಿ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಭೂಮಿಪೂಜೆ ನೆರವೆರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.ಗುಣಮಟ್ಟದ ಕಾಮಗಾರಿ‌ ಮಾಡುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಶಾಸಕ ಸಿ ಎಂ ನಿಂಬಣ್ಣವರ ಸೂಚಿಸಿದರು.

ಈ ಸಂದರ್ಭದಲ್ಲಿ ತಾ ಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ಪಿ ಡ್ಲ್ಯೂ ಡಿ ಎಇ ಪ್ರಕಾಶ ಹಸರಡ್ಡಿ,ಚಿಕ್ಕಮಠ,ರಾಮರಾವ್,ಲಿಂಗರಡ್ಡಿ‌ ನಡುವಿನಮನಿ ಹಾಗೂ ತಾ ಪಂ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/02/2021 02:15 pm

Cinque Terre

14.44 K

Cinque Terre

2

ಸಂಬಂಧಿತ ಸುದ್ದಿ