ನವಲಗುಂದ : ಮಳೆಯಿಂದಾಗಿ ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು ಆದರೆ ಈಗ ಹಲವು ರಸ್ತೆ ಕಾಮಗಾರಿಗಳಿಗೆ ಅಸ್ತು ಎಂದಿದ್ದು, ಅದು ಕೇವಲ ಪ್ಯಾಚ್ ವರ್ಕ್ ಗೆ ಸೀಮಿತವಾದಂತೆ ಕಾಣುತ್ತಿದೆ.
ಹೌದು ನವಲಗುಂದದಿಂದ ಅಣ್ಣಿಗೇರಿ ರಸ್ತೆ ಸಂಪೂರ್ಣ ಹದಗೆಟ್ಟಿತ್ತು, ಇಲ್ಲಿ ಸಂಪೂರ್ಣ ರಸ್ತೆ ನಿರ್ಮಾಣದ ಅಗತ್ಯವಿತ್ತು ಆದರೆ ಈಗ ಕೇವಲ ಇಲ್ಲಿ ಪ್ಯಾಚ್ ವರ್ಕ್ ಕೆಲಸ ಮಾಡಲಾಗಿದ್ದು,. ಈಗ ಎಪಿಎಂಸಿ ಕೂಡ ಇಲ್ಲಿಯೇ ಇರೋದ್ರಿಂದ ಜನದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಾಗಲಿದೆ. ಇದರಿಂದ ಈ ರಸ್ತೆ ಮತ್ತೆ ಹದಗೆಡುವ ಆತಂಕವಿದೆ. ಸ್ಥಳೀಯ ಶಾಸಕರಾಗಲಿ ಸಂಬಂಧ ಪಟ್ಟ ಅಧಿಕಾರಿಗಳಗಲಿ ಇತ್ತ ಗಮನ ಹರಿಸಬೇಕಿದೆ.
Kshetra Samachara
26/01/2021 10:19 am