ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ಸ್ಥಗಿತಗೊಂಡ ಸಾರಿಗೆ ಸಂಸ್ಥೆ ಬಹುದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ ಎದುರಿಸಿತ್ತು.ಅಲ್ಲದೆ ಆನ್ ಲಾಕ್ ಪ್ರಾರಂಭದ ಸಂದರ್ಭದಲ್ಲಿ ಕೂಡ ಜನರು ಬಸ್ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದರೂ ಆದ್ರೇ ಈಗ ನಗರ ಸಾರಿಗೆ ಸೇವೆ ಚೇತರಿಸಿಕೊಂಡಿದ್ದು,ಸಂಪೂರ್ಣ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಆದ್ರೇ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸಾರ್ವಜನಿಕ ಸ್ಯಾನಿಟೈಸರ್ ಕಾರ್ಯ ಮಾತ್ರ ಮರೆಯಾಗಿದೆ.
ಸುಮಾರು 776 ಬಸ್ ಕಾರ್ಯಾಚರಣೆ ನಡೆಸುತ್ತಿವೆ. 15 ಸಾವಿರ ಜನರು ಸ್ಟಾರ್ಟಿಂಗ್ ಪಾಯಿಂಟ್ ಇಂದ ಪ್ರಯಾಣ ಬೆಳೆಸುತ್ತಿದ್ದು,ಪ್ರಾರಂಭದ ಹಂತದಲ್ಲಿ 12 ಸಾವಿರ ಜನರು ಸ್ಟಾರ್ಟಿಂಗ್ ಪಾಯಿಂಟ್ ಇಂದ ಪ್ರಯಾಣಿಸುತ್ತಿದ್ದರು.ಈಗ ಚೇತರಿಕೆಗೊಂಡ ಬೆನ್ನಲ್ಲೇ ಸುಮಾರು 3000 ಸ್ಟಾರ್ಟಿಂಗ್ ಪಾಯಿಂಟ್ ಪ್ರಯಾಣ ಹೆಚ್ಚಾಗಿದ್ದು,ಸುಮಾರು 1.5 ಲಕ್ಷ ಆದಾಯದಲ್ಲಿ ಹೆಚ್ಚಾಗಿದೆ.ಅಲ್ಲದೇ ಶಾಲೆ ಹಾಗೂ ಕಾಲೇಜು ಪ್ರಾರಂಭಗೊಂಡಿರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.ಆದರೇ ಸಮರ್ಪಕವಾದ ಬಸ್ ವ್ಯವಸ್ಥೆ ಮಾತ್ರ ಸಿಗುತ್ತಿಲ್ಲ. ಇಂದಿಗೂ ಕೂಡ ಬಸ್ಸಿನಲ್ಲಿ ವಿದ್ಯಾರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ.
ಈಗಾಗಲೇ ಕೇವಲ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಶಾಲೆ ಹಾಗೂ ಕಾಲೇಜು ಮಾತ್ರ ಪ್ರಾರಂಭಗೊಂಡಿದೆ.ಆದರೂ ಕೂಡ ಬಸ್ಸಿನ ಪ್ರಮಾಣ ಕಡಿಮೆಯಾಗಿದೆ.ಸುಮಾರು 776 ಸರದಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಕೂಡ ಬಸ್ಸಿನಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇರಲಿ ತಮ್ಮ ಸ್ಥಳವನ್ನು ತಲುಪಲು
ಕಷ್ಟ ಪಡುವಂತಾಗಿದೆ.
ಒಟ್ಟಿನಲ್ಲಿ ನಗರ ಸಾರಿಗೆ ಚೇತರಿಸಿಕೊಂಡು ಅರ್ಥಿಕವಾಗಿ ಮುನ್ನಡೆ ಸಾಧಿಸುತ್ತಿದೆ.ಈ ಹಿನ್ನೆಲೆಯಲ್ಲಿ ಕೂಡಲೇ ಮತ್ತಷ್ಟು ಬಸ್ ಕಾರ್ಯಾಚರಣೆ ಜೊತೆಗೆ ಕೊವೀಡ್ ನಿಯಮ ಪಾಲನೆ ಮಾಡಬೇಕು ಎಂಬುವುದು ನಮ್ಮ ಆಶಯ...
Kshetra Samachara
25/01/2021 07:49 pm