ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಉಪ‌ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಂದ ನೂತನ ಬಸ್ ಘಟಕ ಉದ್ಘಾಟನೆ

ಕಲಘಟಗಿ: ಬಹು‌ ನಿರೀಕ್ಷಿತ ಪಟ್ಟಣದಲ್ಲಿನ ನೂತನ ಬಸ್ ಘಟಕದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರ‌ಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ನೆರವೇರಿಸಿದರು.

ಅವರು‌ ಪಟ್ಟಣದ ಯಲ್ಲಾಪುರ ರಸ್ತೆಗೆ ಹೊಂದಿಕೊಂಡು ಸುಮಾರು ಎಳು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬಸ್‌ ಘಟಕವನ್ನು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.

ಬಸ್ ಡಿಪೋದಲ್ಲಿನ ಬಸ್ ವಾಶ್,ಡಿಸೇಲ್ ಪಂಪ್ ಹಾಗೂ ಬಸ್ ದುರಸ್ತಿ ಅಂಕಣ ಉದ್ಘಾಟನೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು.

ಕಲಘಟಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಬಸ್ (ಡಿಪೋ) ಘಟಕದ ಉದ್ಘಾಟನೆಯಿಂದ ಸಾರಿಗೆ ಸಮಸ್ಯೆ ನಿಗಲಿದೆ.

ಶಾಸಕ ಸಿ ಎಂ ನಿಂಬಣ್ಣವರ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ ಎಸ್ ಪಾಟೀಲ‌,ಎಸ್ ಐ ಚಿಕ್ಕನಗೌಡರ,ಶಂಕರ ಪಾಟೀಲ ಮುನೆನಕೊಪ್ಪ ಹಾಗೂ ಜನಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/01/2021 07:42 pm

Cinque Terre

69.89 K

Cinque Terre

0

ಸಂಬಂಧಿತ ಸುದ್ದಿ