ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅತಂತ್ರವಾದ ಅಬಕಾರಿ ಇನ್ಸಪೆಕ್ಟರ್ ಅವರ ವಲಯ ಕಚೇರಿ

ಕುಂದಗೋಳ : ನಮಸ್ಕಾರ ಕುಂದಗೋಳ ತಾಲೂಕಿನ ಜನತೆಗೆ...ನಿಮ್ಮ ತಾಲೂಕನ್ಯಾಗ ನೋಡ್ರಿ ಇಲ್ಲೋಂದು ಇಲಾಖೆ ಇದೆ. ಆ ಇಲಾಖೆ ಕರ್ತವ್ಯವೇ ಅಕ್ರಮ ಸಾರಾಯಿ ಸಾಗಾಟ ಹಾಗೂ ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಿ ತಪ್ಪೆಸಗಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು.

ಆದ್ರೇ ಸತತ ಐದು ವರ್ಷಗಳಿಂದ ಆ ಇಲಾಖೆ ತನ್ನೊಳಗೆ ಹಲವಾರು ದೋಷಗಳನ್ನು ಇಟ್ಟುಕೊಂಡು ಕರ್ತವ್ಯ ಮಾಡೋದಾದ್ರು ಹೇಗೆ ? ಹೇಳಿ, ಅಲ್ಲೇನಿದೆ ಪ್ರಾಬ್ಲಂ ಅಂದ್ರಾ ?

ನೋಡಿ. ಇಲ್ಲೇನು ಮನೆ ಕಾಣುತ್ತಿದೆ ಅಲ್ವಾ, ಅದು ಮನೆ ಅಲ್ಲಾ ಅದು ಅಸಲಿಗೆ ಅದು ಕುಂದಗೋಳದ ಅಬಕಾರಿ ಇನ್ಸಪೆಕ್ಟರ್ ಅವರ ವಲಯ ಕಚೇರಿ ಸತತ 5 ವರ್ಷ ಅಂದ್ರೇ 2015 ರಿಂದ ಈ ನೂತನ ವರ್ಷ 2021 ಬಂದ್ರು, ಈ ಇಲಾಖೆ ಬಾಡಿಗೆ ಆಧಾರಿತ ಕಟ್ಟಡದಲ್ಲೇ ಅಂದ್ರೇ ಖಾಸಗಿಯವರು ಕಟ್ಟಿದ ಮನೆ ಒಳಗೆ ಬಾಡಿಗೆ ಆಧಾರದಲ್ಲಿ ತನ್ನ ಕರ್ತವ್ಯ ಮಾಡಬೇಕಾದ ಅನಿವಾರ್ಯತೆ ಇದೆ.

ಇನ್ನು ಈ ಇಲಾಖೆಗೆ ಎಲ್ಲಾದರು ಸಾರಾಯಿ ಸಾಗಾಟ, ಮಾರಾಟ ಕಂಡ್ರೇ ಕರೆ ಮಾಡಿ ತಿಳಿಸಲು ಆಗೋದಿಲ್ಲ, ಹಾಗೇನಾದ್ರೂ ಇದ್ರೆ ಎಷ್ಟೋತ್ತಿದ್ದರು ನೀವು ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಾಲ್ ಮಾಡ್ಬೇಕು ಯಾಕಪ್ಪಾ ? ಅಂದ್ರಾ ಈ ಇಲಾಖೆಗೆ ಇನ್ನು ಲ್ಯಾಂಡ್ ಲೈನ್, ಟೆಲಿಪೋನ್ ಸಂಪರ್ಕ ಸಿಕ್ಕಿಲ್ಲಾ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಮನವಿ ಮಾಡಿ ಅಬಕಾರಿ ಇನ್ಸಪೆಕ್ಟರ್ ಸುಸ್ತಾಗಿದ್ದಾರೆ.

ಇನ್ನು ಇಂಟರ್ನೆಟ್ ಸೌಲಭ್ಯವಂತು ಮೊದಲೇ ಇಲ್ಲಾ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳೇ ಈ ಡಿಜಿಟಲ್ ಜಾಯಮಾನದಲ್ಲೂ ಡೋಂಗಲ್ ಮೋರೆ ಹೋಗಿ ಅಂತರ್ಜಾಲ ಸಂಪರ್ಕವನ್ನ ಪಡಿಬೇಕು.

ಅಬ್ಬಾ ! ನೋಡಿ ಸತತ ಐದು ವರ್ಷಗಳಿಂದ ಈ ಇಲಾಖೆ ಪಾವತಿಸಿದ ಬಾಡಿಗೆ ಹಣದಲ್ಲಿ ಸ್ವಂತ ಜಾಗವನ್ನೇ ಖರೀದಿ ಮಾಡ್ತಿತ್ತೇನು ? ಬಿಡಿ. ಪ್ರಸ್ತುತ ಈ ಇಲಾಖೆ ಬಾಡಿಗೆ ತಿಂಗಳಿಗೆ 10.700 ರೂಪಾಯಿ ವ್ಹಾ ವ್ಹಾ.

ಇಡೀ ರಾಜ್ಯವನ್ನು ಸುಧಾರಿಸಲು ಹೊರಟಿರೋ ಸರ್ಕಾರಕ್ಕೆ ಆದಾಯದ ಬೃಹತ್ ಮೂಲ ಅಬಕಾರಿ ಇನ್ಸಪೆಕ್ಟರ್ ವಲಯ ಕಚೇರಿಗೆ ಸೂಕ್ತ ಸರ್ಕಾರಿ ಕಟ್ಟಡ ಕಲ್ಪಿಸಿ ಕೊಡುವ ಅರ್ಹತೆ ಇಲ್ಲಾ ಎಂದು ಸಾರ್ವಜನಿಕರೇ ಟೀಕೆ ಮಾಡು ಸಂದರ್ಭ ಒದಗಿದೆ.

Edited By : Manjunath H D
Kshetra Samachara

Kshetra Samachara

23/01/2021 05:50 pm

Cinque Terre

29.58 K

Cinque Terre

0

ಸಂಬಂಧಿತ ಸುದ್ದಿ