ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಆಗಬೇಕು ಎಂದು ಹೇಳುತ್ತಾರೆ. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕ್ಷೇತ್ರದಲ್ಲಿರುವ ಕಿಮ್ಸ್‌ನಲ್ಲಿ ಝೆರಾಕ್ಸ್ ಇಂಡಿಯಾ ಭಾರೀ ಸದ್ದು ಮಾಡುತ್ತಿದೆ. ಪರಿಣಾಮ ರೋಗಿಗಳ ಸಂಬಂಧಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ಹೌದು. ಕಿಮ್ಸ್‌ಗೆ ದಾಖಲಾಗುವ ಗರ್ಭಿಣಿಯರು, ರೋಗಿಗಳಿಗೆ ಸಂಬಂಧಿಸಿದ ದಾಖಲಾತಿಯ ಝೆರಾಕ್ಸ್ ಪ್ರತಿಯನ್ನು ಪಡೆಯಲಾಗುತ್ತಿದೆ. ಹೀಗಾಗಿ ಝೆರಾಕ್ಸ್ ಮಾಡಿಸಲು ಕಿಮ್ಸ್ ಆವರಣದಲ್ಲಿರುವ ಅಂಗಡಿಗೆ ಹೋದರೆ ಒಂದು ಪ್ರತಿ ಝೆರಾಕ್ಸ್‌ಗೆ ಮೂರು ಪಡೆಯಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಪೇಪರ್ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರು. ಆದರೆ ಕಿಮ್ಸ್‌ನಿಂದ ಸ್ವಲ್ಪ ಹೊರಗೆ ಬಂದು ಝೆರಾಕ್ಸ್ ಮಾಡಿಸಿದರೆ ಒಂದು ಪ್ರತಿಗೆ ಎರಡು ರೂ. ಇದೆ.
ಡಿಜಿಟಲ್ ಇಂಡಿಯಾಗೆ ಒತ್ತು ನೀಡಬೇಕೆಂದು ಪ್ರಧಾನಿ ಮೋದಿ ಹೇಳಿರುವುದು ಕಿಮ್ಸ್ ಸಿಬ್ಬಂದಿಗೆ ತಲುಪಿಲ್ಲ ಅಂತ ಕಾಣಿಸುತ್ತದೆ. ಅದಕ್ಕೆ ಇನ್ನೂ ಝೆರಾಕ್ಸ್ ಕಾಪಿ ಹಿಂದೆ ಬಿದ್ದಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
Kshetra Samachara
15/01/2021 06:55 pm