ನವಲಗುಂದ : ವರ್ಷಗಳಿಂದ ಡಾಂಬರಿಕರಣವಾಗದ ರಸ್ತೆ ಇದು, ಮಳೆಗಾಲ ಬಂದರೆ ಜನರ ಪರದಾಟ ಹೇಳತೀರದ್ದು, ಈ ರಸ್ತೆ ನವಲಗುಂದ ಪಟ್ಟಣದ ಆನೆಗುಂದಿ ಪ್ಲಾಟ್ ನಲ್ಲಿ, ನೆನ್ನೆ ಸುರಿದ ಮಳೆಗೆ ರಸ್ತೆ ಅವಸ್ಥೆ ಈ ರೀತಿ ಆಗಿದೆ.
ಈ ರಸ್ತೆ ಬಗ್ಗೆ ಎಷ್ಟೇ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದರು ಸಹ ಇದುವರೆಗೆ ಡಾಂಬರಿಕರಣ ಮಾಡಲು ಅಧಿಕಾರಿಗಳು ಮುಂದಾಗಿಲ್ವಂತೆ, ಇನ್ನು ಈ ಪ್ಲಾಟ್ ನಲ್ಲಿರುವ ಜನರು ಹೆಚ್ಚು ವೃದ್ದರು ಇರೋದ್ರಿಂದ ಸಮಸ್ಯೆ ದೊಡ್ಡದಾಗಿದೆ.
ವರ್ಷಗಳಿಂದ ಇದೆ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
Kshetra Samachara
09/01/2021 03:48 pm