ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಜನವಸತಿ ಪ್ರದೇಶದಲ್ಲಿ ಹಾಯ್ದು ಹೋದ ಹೈಟೆನ್ಸನ್ ವಾಯರ್, ಜನರಿಗೆ ಚೆಲ್ಲಾಟ, ಕೆಪಿಟಿಸಿಎಲ್ ಸಿಬ್ಬಂದಿ ಪ್ರಾಣ ಸಂಕಟ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ - ವಸತಿ ಪ್ರದೇಶಗಳ ಮೂಲಕ ಹಾದುಹೋಗುವ ಅಧಿಕ ಒತ್ತಡದ ವಿದ್ಯುತ್ ಮಾರ್ಗಗಳು, ಕೆಪಿಟಿಸಿಎಲ್ ಸಿಬ್ಬಂದಿಯ ನಿದ್ದೆಗೆಡಿಸಿದ್ರೆ ಜನರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ....

ಹುಬ್ಬಳ್ಳಿ ಧಾರವಾಡದಂತ ಮಹಾನಗರಗಳ ಮಧ್ಯೆದಲ್ಲಿ ಜನವಸತಿ ಪ್ರದೇಶದ ಮೂಲಕ, ಹಾದುಹೋಗುವ ಅಧಿಕ ಒತ್ತಡದ ವಿದ್ಯುತ್ ಸಂಪರ್ಕ ತೀವ್ರ ಅಪಾಯಕಾರಿಯಾಗಿದೆ. ಮಳೆ, ಗಾಳಿ ಹಾಗೂ ಆಕಸ್ಮಿಕವಾಗಿ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದರೆ ಭಾರಿ ಅನಾಹುತ ಸಂಭವಿಸುತ್ತವೆ. ಆದ್ರೆ ಜನರು ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದಿರುವದು ಆತಂಕಾರಿಯಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಇಂತ ಲೈನ್ ಗಳ ಕೆಳಗಡೆ ಜನರು ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ರೀತಿ ಮನೆಗಳನ್ನು ನಿರ್ಮಾಣ ಮಾಡಿದ್ದು ಅಪಾಯನ್ನಂಟು ಮಾಡಿದ ಉದಾಹರಣೆಗಳು ನಗರದಲ್ಲಿ ಆಗಾಗ ನಡೆಯುತ್ತಿವೆ. ಮಕ್ಕಳು ಆಟವಾಡಲು ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದಾಗ ವಿದ್ಯುತ್ ಪ್ರಸರಣವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದೇ ದೊಡ್ಡದೊಂದು ಸವಾಲಾಗಿದೆ. ನಗರದದಲ್ಲಿ ಹಾಯ್ದು ಹೋದ ಈ ಹೈಟೆನ್ಸನ್ ವಾಯರ್ ಗಳನ್ನು ಸ್ಥಳಾಂತರಿಸಲು ಜನರ ಒತ್ತಾಯವಾಗಿದೆ....

ಇಂತ ಪ್ರಕರಣಗಳಿಗೆ ಕಡಿವಾಣ ಹಾಕುವದು ಸವಾಲಿನ ಕೆಲಸವಾಗಿದೆ. ನಗರ ಬೆಳೆದಂತೆ ಊರ ಹೊರಗಿದ್ದ ಲೈನ್ ಗಳು ನಗರದ ಮಧ್ಯೆ ಭಾಗದಲ್ಲಿ ಬಂದಿವೆ. ಅದಲ್ಲದೆ ಜನರು ಕೂಡ ಇಂತ ಅಪಾಯಕಾರಿ ಲೈನ್ ಗಳ ಕೆಳಗೆ ಮನೆ ಕಟ್ಟಿಕೊಂಡು ಇದ್ದಾರೆ. ಇಂತವರನ್ನು ತೆರವುಗೊಳಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಪ್ರತಿ ವರ್ಷ ನಗರದಲ್ಲಿ 200 ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್ ನೀಡುತ್ತಿದ್ದಾರೆ.‌ ಕೆಲವರು ಈ ನೋಟಿಸ್ ಗಳ ವಿರುದ್ದ ಕೋರ್ಟ್ ಮೊರೆ ಹೋಗಿದ್ದಾರೆ. ನಮಗೆ ಪರಿಹಾರ ಕೊಟ್ಟರೆ ಮನೆ ಖಾಲಿ ಮಾಡುವದಾಗಿ ಅಧಿಕಾರಿಗಳಿಗೆ‌ ಹೇಳುತ್ತಿದ್ದಾರೆ. ಇದು ಕೆಪಿಟಿಸಿ ಎಲ್ ಸಿಬ್ಬಂದಿಗಳಿಗೆ ತಲೆನೋವನ್ನು ತಂದಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಸಭೆಗಳನ್ನು ಮಾಡುತ್ತಿದ್ದಾರೆ. ಆದ್ರೆ ಅದ್ಯಾವುದಕ್ಕೂ‌ ಜನರು ಜಗ್ಗುತ್ತಿಲ್ಲ. ನಾವು ಹಲವು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಏನು ಆಗಿಲ್ಲ ಎಂಬ ಉಢಾಪೆ ಭಾವನೆ ಜನರಲ್ಲಿದ್ದು ಇದು ಹೋಗಬೇಕಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಪಿಟಿಸಿಎಲ್ ಆ್ಯಕ್ಟ್ ಪ್ರಕಾರ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅನಾಹುತ ಸಂಭವಿಸಿದಾಗ ವಿದ್ಯುತ್ ಇಲಾಖೆಯನ್ನು ಜರಿಯುವ ಜನರಲ್ಲಿ ಜಾಗೃತಿ ಮಾಡಬೇಕು. ಜನನಾಯಕರು ಕೂಡ ಇಂತ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಹೈ ವೋಲ್ಟೇಜ್ ಲೈನ್ ಗಳ ಸ್ಥಳಾಂತರಕ್ಕೆ ಮುಂದಾಗಬೇಕಿದೆ....!

Edited By : Nagesh Gaonkar
Kshetra Samachara

Kshetra Samachara

09/01/2021 03:15 pm

Cinque Terre

28.76 K

Cinque Terre

2

ಸಂಬಂಧಿತ ಸುದ್ದಿ