ಕಲಘಟಗಿ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ನೆಲಸಮವಾಗುತ್ತಿದ್ದು, ನಿನ್ನೆ ಕಲಘಟಗಿ ಪಟ್ಟಣದ ಮಚೀಗಾರ ಒಣಿಯಲ್ಲಿರುವ ಬಸವರಾಜ ಬೆಟಗೇರಿ ಎಂಬುವವರ ಮನೆ ಗೋಡೆ ಕುಸಿದು ಬಿದ್ದಿದೆ.
ಮಳೆಯಿಂದಾಗಿ ಮನೆ ಗೋಡೆ ಕುಸಿಯುತ್ತಿರುವದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಮನೆಯಿಂದ ಆಚೆಗೆ ಬಂದಿದ್ದು, ಅದೃಷ್ಟವಶಾತ್ ಯಾವದೇ ಘಟನೆ ಸಂಭವಿಸಿಲ್ಲ. ಎದುರುಗಡೆ ಇದ್ದ ಮನೆಯವರು ಗೋಡೆ ಬಿಳುವ ದೃಶ್ಯವನ್ನು ತಮ್ಮ ಮೋಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
-ಉದಯ ಗೌಡರ
Kshetra Samachara
07/10/2022 09:46 am