ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಳೆಹಾನಿ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ, ರೊಚ್ಚಿಗೆದ್ದ ಗ್ರಾಮಸ್ಥರು

ಅಣ್ಣಿಗೇರಿ : ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಹಾನಿ ಉಂಟಾಗಿ ಜನಜೀವನ ದುಸ್ತರವಾಗಿದೆ. ಮಳೆಯ ರಭಸಕ್ಕೆ ಪಟ್ಟಣದ ಕೆಲ ಬಡಾವಣೆಗಳಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಮಳೆಯ ನೀರು ಮಂಗಳವಾರ ಸಾಯಂಕಾಲದವರೆಗೂ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ಹಾನಿಗೊಳಗಾದ ಪ್ರದೇಶಗಳಿಗೆ ತಹಶೀಲ್ದಾರ್ ಮಂಜುನಾಥ ಅಮಾಸಿ ಹಾಗೂ ಮುಖ್ಯಾಧಿಕಾರಿ ಕೆ.ಎಫ್‌.ಕಟಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವಾಗ, ಸ್ಥಳೀಯರು ರೊಚ್ಚಿಗೆದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆಯ ನೀರು ಪಟ್ಟಣದಿಂದ ಹೊರಹೋಗಬೇಕು ವಿನಃ , ಹೊರಗಡೆಯಿಂದ ಪಟ್ಟಣದ ಒಳಗೆ ನುಗ್ಗಿ ಇಂತಹ ದುರ್ಘಟನೆ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.ಪಟ್ಟಣದ ಒಳಗಡೆ ನುಗ್ಗಿದ ನೀರಿನಲ್ಲಿ ಹಾವು, ಚೇಳುಗಳ ಹಾವಳಿ ಹೆಚ್ಚಾಗಿ ಹೊರಗಡೆ ಹೋಗದಂತ ವಾತಾವರಣ ನಿರ್ಮಾಣವಾಗಿದೆ. ಪಟ್ಟಣದ ಒಳಗಡೆ ಸುಮಾರು 150ಕ್ಕೂ ಹೆಚ್ಚು ಎಕರೆ ಪ್ರದೇಶದ ನೀರು ಆಗಮಿಸಿದೆ. ಪಟ್ಟಣದ ಒಳಗಡೆ ಬರುವ ನೀರಿನ ದಾರಿಯನ್ನು ಬಂದ ಮಾಡಿ ಬೇರೆ ಕಡೆ ನೀರು ಹರಿಯುವಂತೆ ಶಾಶ್ವತ ಪರಿಹಾರ ಮಾಡಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

Edited By : Shivu K
Kshetra Samachara

Kshetra Samachara

12/10/2021 05:14 pm

Cinque Terre

17.92 K

Cinque Terre

0

ಸಂಬಂಧಿತ ಸುದ್ದಿ