ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೆಲಗೇರಿ ಕೆರೆಗೆ ಉಪಲೋಕಾಯುಕ್ತರ ಭೇಟಿ, ಸ್ವಯಂ ದೂರು ದಾಖಲಿಸಿಕೊಳ್ಳಲು ಮುಂದಾದ ಫಣೀಂದ್ರ

ಧಾರವಾಡ: ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ವಿನ್ಯಾಸಗೊಂಡ ಧಾರವಾಡದ ಕೆಲಗೇರಿ ಕೆರೆಗೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಗುರುವಾರ ದಿಢೀರ್ ಭೇಟಿ ನೀಡಿದರು.

ಕೆಲಗೇರಿ ಕೆರೆ ನಿರ್ವಹಣೆ ಮಾಡುವ ಅಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಕೆರೆಯ ಅವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಈ ಕೆರೆ ನಿರ್ವಹಣೆ ಜವಾಬ್ದಾರಿ ಯಾರ್‍ಯಾರ ಮೇಲಿದೆಯೋ ಅವರೆಲ್ಲರನ್ನು ಪಾರ್ಟಿ ಮಾಡಿಕೊಂಡು ಸ್ವಯಂ ದೂರು ಸಹ ದಾಖಲಿಸಿಕೊಳ್ಳುತ್ತೇನೆ ಎಂದು ಅವರು ಖಡಕ್ ಸೂಚನೆ ನೀಡಿದರು.

ಕೆಲಗೇರಿ ಕೆರೆಯಲ್ಲಿ ಬೆಳೆದಿದ್ದ ಅಂತರಗಂಗೆ, ಪಾತ್‌ ವೇನಲ್ಲಿ ಬೆಳೆದಿರುವ ಗಿಡ ಗಂಟಿ, ಕೆರೆಗೆ ಮಿಶ್ರಣವಾಗುತ್ತಿರುವ ಚರಂಡಿ ನೀರು, ಕೆರೆಯ ನೀರಿನಲ್ಲಿರುವ ನೊರೆ, ಸರಿಯಾಗಿ ನಿರ್ವಹಣೆಯಾಗದ ಚರಂಡಿ ಇವೆಲ್ಲವುಗಳನ್ನು ಕಂಡು ಉಪಲೋಕಾಯುಕ್ತರು ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ತೀವ್ರ ಗರಂ ಆದರು. ಈ ಕೆರೆ ನಿರ್ವಹಣೆ ಕೃಷಿ ವಿಶ್ವವಿದ್ಯಾಲಯದ ಮೇಲಿದ್ದು, ಅದರ ನಿರ್ವಹಣೆ ಕೃಷಿ ವಿಶ್ವವಿದ್ಯಾಲಯದವರೇ ಮಾಡಲಿ ಎಂದು ಪಾಲಿಕೆಯವರು. ಪಾಲಿಕೆಯವರೇ ಮಾಡಲಿ ಎಂದು ಕೃಷಿ ವಿಶ್ವವಿದ್ಯಾಲಯದವರು ಒಬ್ಬರ ಮೇಲೆ ಒಬ್ಬರು ತಳ್ಳಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಕೆರೆಯನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲೂ ಇದೆ. ತಮ್ಮ ಮನೆ ಸ್ವಚ್ಛವಾಗಿದ್ದರೆ ಸಾಕು ಎಂದು ಮನೆಯ ಕಸವನ್ನು ಕೆರೆಯ ದಂಡೆಯ ಮೇಲೆ ತಂದು ಎಸೆಯುವುದನ್ನು ಬಿಡಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಕೆಲಗೇರಿ ಜನರನ್ನು ಕೂಡಿಸಿ ಅವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಇನ್ನು 20 ದಿನದಲ್ಲಿ ಮಹಾನಗರ ಪಾಲಿಕೆಯವರು ಮತ್ತು ಕೃಷಿ ವಿಶ್ವವಿದ್ಯಾಲಯದವರು ಜಂಟಿಯಾಗಿ ಕೆಲಗೇರಿ ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ಕೆರೆಯಲ್ಲಿನ ಅಂತರ ಗಂಗೆಯನ್ನು ತೆಗೆದು ಹಾಕಿ, ಪಾತ್ ವೇಯಲ್ಲಿ ಬೆಳೆದ ಗಿಡ, ಗಂಟಿಗಳನ್ನು ಸ್ವಚ್ಛಗೊಳಿಸಬೇಕು. ಕೆರೆಯ ಪಕ್ಕವೇ ಇರುವ ಚರಂಡಿಯನ್ನು ಸ್ವಚ್ಛಗೊಳಿಸಿ ಅದರ ಫೋಟೋ ಹಾಗೂ ವೀಡಿಯೋಗಳನ್ನು ನನಗೆ ಕಳುಹಿಸಬೇಕು ಎಂದು ಉಪಲೋಕಾಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Edited By : Manjunath H D
Kshetra Samachara

Kshetra Samachara

21/11/2024 01:37 pm

Cinque Terre

24.43 K

Cinque Terre

2

ಸಂಬಂಧಿತ ಸುದ್ದಿ