ಹುಬ್ಬಳ್ಳಿ : ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಗೆ ಕಡಿವಾಣ ಹಾಕಬೇಕು, ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡ -ಬೇಕೆಂದು ನಗರದ ಪ್ರತಿಷ್ಠಿತ ಎಸ್.ಡಿ.ಎಂ ಆಸ್ಪತ್ರೆ ಮುಂದೆ ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ಅಳವಡಿಸಿದ ಟ್ರಾಫಿಕ್ ಸಿಗ್ನಲ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.
ಸ್ವಾಮಿ ನಿತ್ಯ ಹುಬ್ಬಳ್ಳಿ ಧಾರವಾಡಕ್ಕೆ ಸಂಚರಿಸುವ ಲಕ್ಷಾಂತರ ವಾಹನ ಸವಾರರು ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗಲು ನಿರ್ಮಿಸಿದ ಈ ಸಿಗ್ನಲ್'ನಲ್ಲಿ ಕೆಂಪು ದೀಪ ಕಂಡ್ರು ವಾಹನಗಳು ಸರಕ್ಕನೆ ಪಾಸಾಗಿ ಬಿಡ್ತವೆ. ಈ ಕಥೆ ಇಂದಲ್ಲ ನಿನ್ನೆಯಲ್ಲ ಈ ಸಿಗ್ನಲ್ ಹಾಕಿದಾಗ ನಿಂದಲೂ ನಿತ್ಯ ಇದೇ ಗೋಳು ಎಂತಾರೇ ಸ್ಥಳೀಯರು.
ಹಗಲು ರಾತ್ರಿ ಯಾವುದೇ ಸಮಯ ಇರಲಿ, ಈ ಸಿಗ್ನಲ್ ಯಾರು ಲೆಕ್ಕಿಸೋದೆ ಇಲ್ಲ, ಮುಖ್ಯವಾಗಿ ಜನರೇ ಹೇಳೋ ಪೈಕಿ ಸಾರಿಗೆ ಬಸ್, ಪೊಲೀಸ್ ವಾಹನಗಳೇ ಈ ಸಿಗ್ನಲ್ ಪರಿಗಣಿಸದೇ ಓಡ್ತಾಡ್ತಾ ಇರೋದು ವಿಪರ್ಯಾಸದ ಸಂಗತಿ.
ಈ ಬಗ್ಗೆ ಹಿಂದೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದ್ರೂ ಇಂದಿಗೂ ಅದೇ ಪರಿಸ್ಥಿತಿ ಇರೋದು ದುರದೃಷ್ಟಕರ, ಇನ್ನಾದರೂ ಸಂಬಂಧಪಟ್ಟವರು ಗಮನಿಸಿ ಸಿಗ್ನಲ್ ಬಿದ್ದಾಗ ವಾಹನ ನಿಲ್ಲಿಸಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
01/01/2021 08:49 pm