ಕುಂದಗೋಳ: ಇಲ್ಲೊಂದು ಗ್ರಾಮದಲ್ಲಿ ಮಳೆಯಾದ್ರೆ ಸಾಕು ರಭಸದಿಂದ ಮನೆಗಳಿಗೆ ನೀರು ನುಗ್ಗುವ ಅವ್ಯವಸ್ಥೆಗೆ ಸೂಕ್ತ ಉತ್ತರ ಸಿಗದೆ ಜನಸಾಮಾನ್ಯರು ಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೌದು ! ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ, ಕೆರೆಗೆ ನೀರು ಹೋಗುವ ಕೋಡಿಗೆ ಸೂಕ್ತ ಮಾರ್ಗ ಇರದ ಕಾರಣ ಕಳೆದ ಐದು ವರ್ಷಗಳಿಂದ ಧಾರಾಕಾರ ಮಳೆ ಸುರಿದ್ರೆ ಯರೇಬೂದಿಹಾಳ ಗ್ರಾಮಸ್ಥರ ನಿತ್ಯದ ಜೀವನವೇ ಕಷ್ಟ. ಅದರಂತೆ ನಿನ್ನೆ ರಾತ್ರಿ ಸುರಿದ ಮಳೆಯ ಹೊಡೆತಕ್ಕೆ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು ಜನ ಅಧಿಕಾರಿ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕುತ್ತಾ ಮನೆಯ ಒಳಗಿನ ನೀರು ತುಂಬಿ ಹೊರ ಹಾಕುತ್ತಿದ್ದಾರೆ.
ಮಳೆಗೆ ಯರೇಬೂದಿಹಾಳ ಗ್ರಾಮದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರೈತರು ಸಂಗ್ರಹಿಸಿಟ್ಟ ದವಸ ಧಾನ್ಯ, ಜಾನುವಾರುಗಳ ಮೇವು ಸಹ ಹಾಳಾಗಿದ್ದು ಜನ ಮೋಟಾರ್ ಮೂಲಕ ಮನೆ ಒಳಗಿನ ನೀರು ಹೊರ ಹಾಕುತ್ತಿದ್ದಾರೆ.
ಇನ್ನೂ ವಿಷಯ ತಿಳಿದು ಸ್ಥಳೀಯ ತಹಶಿಲ್ದಾರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ. ಆದ್ರೇ ಈ ಸಮಸ್ಯೆಗೆ ಯಾವಾಗ? ಏನು ? ಪರಿಹಾರ ? ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲಾ ಜನರ ಗೋಳಾಟ ತಪ್ಪುತ್ತಿಲ್ಲ.
Kshetra Samachara
30/08/2022 05:04 pm