ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೋಲಾಗುತ್ತಿದೆ ನೀರು: ಜಲಮಂಡಳಿಯವರೇ ಇತ್ತ ಕಡೆ ನೋಡಿ

ಧಾರವಾಡ: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮುಂಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಜಲಮಂಡಳಿಯವರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ರಸ್ತೆಯ ತಳಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅದರ ಮೂಲಕ ಕುಡಿಯುವ ನೀರು ಪೋಲಾಗುತ್ತಿದೆ. ಈ ನೀರು ರಸ್ತೆಯ ಮೇಲೆಲ್ಲ ಹರಿಯುತ್ತಿದ್ದು, ಅದನ್ನು ರಿಪೇರಿ ಮಾಡುವ ಕೆಲಸ ಮಾತ್ರ ಆಗಿಲ್ಲ.

ಹೆಚ್ಚೂ ಕಡಿಮೆ ಒಂದು ತಿಂಗಳಿನಿಂದ ಈ ರೀತಿ ನೀರು ಪೋಲಾಗುತ್ತಿದೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಕೂಗಳತೆ ದೂರದಲ್ಲೇ ಜಲ ಮಂಡಳಿ ಇದೆ. ಇದೇ ರಸ್ತೆಯ ಮೂಲಕ ಜಲ ಮಂಡಳಿ ಸಿಬ್ಬಂದಿ ಓಡಾಡುತ್ತಾರೆ. ಆದರೆ, ಅದನ್ನು ದುರಸ್ತಿಗೊಳಿಸುವ ಗೋಜಿಗೆ ಮಾತ್ರ ಯಾರೂ ಹೋಗಿಲ್ಲ. ರಸ್ತೆಯ ಮೇಲೆ ಈ ರೀತಿ ಪ್ರತಿನಿತ್ಯ ನೀರು ಹರಿಯುತ್ತಿರುವುದರಿಂದ ಜಲ ಮಂಡಳಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.

Edited By : Somashekar
Kshetra Samachara

Kshetra Samachara

22/06/2022 02:52 pm

Cinque Terre

86.06 K

Cinque Terre

1

ಸಂಬಂಧಿತ ಸುದ್ದಿ