ನವಲಗುಂದ : ಇಲ್ಲಿನ ಹಳೆ ತಾಲೂಕು ಕಚೇರಿಗೆ ದಿನಕ್ಕೆ ನೂರಾರು ಜನ ತಮ್ಮ ಕೆಲಸಗಳಿಗಾಗಿ ಬರ್ತಾರೆ. ಅಷ್ಟೇ ಅಲ್ಲದೇ ಪಕ್ಕದಲ್ಲೇ ಪೊಲೀಸ್ ಠಾಣೆ ಹಾಗೂ ತಾಲೂಕು ಪಂಚಾಯತ್ ಕಚೇರಿ ಇದೆ. ಇಂತಹ ಜನನಿಬಿಡ ಪ್ರದೇಶದಲ್ಲಿನ ಕಚೇರಿಯ ಮುಖ್ಯದ್ವಾರದ ದುಸ್ಥಿತಿ ಇದು.
ಹೌದು ಶಿಥಿಲಗೊಂಡ ಈ ಕಾಂಪೌಂಡ್ ನಿಂದ ಜನ ಇಲ್ಲಿ ಆತಂಕದಲ್ಲೇ ಸಂಚರಿಸುವಂತಾಗಿದೆ. ಮಳೆಗಾಳಿಗೆ ಯಾವುದೇ ಅಹಿತಕರ ಘಟನೆ ನಡೆಯುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇನ್ನು ಆವರಣದ ಅವ್ಯವಸ್ಥೆಗೆ ಈಗಾಗಲೇ ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ ಬ್ರೇಕ್ ಹಾಕಿದ್ದಾರೆ. ಆದರೆ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ.ಈ ಬಗ್ಗೆ ಸಹ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
08/06/2022 02:43 pm