ಕಲಘಟಗಿ : ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾದ ಕಾಯ್ದೆ ವಿರೋಧಿಸಿ ರಾಜ್ಯ ಬಂದ್ ಗೆ ಕರ್ನಾಟಕ ಸಂಗ್ರಾಮ ಸೇನೆಯಿಂದ ಬೆಂಬಲ ವ್ಯಕ್ತಪಡಿಸಿ ಬಾರಕೋಲ ಬಿಸಿ ಪ್ರತಿಭಟನೆ ಮಾಡಲಾಯಿತು.
ಎಪಿಎಂಸಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಸರ್ಕಾರದ ವಿರೋಧ ಘೋಷಣೆ ಕೂಗಲಾಯಿತು.
ರೈತರೊಂದಿಗೆ ಚರ್ಚಿಸದೆ ಜಾರಿಗೆ ತಂದಿರುವ ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆಗಳನ್ನು ರದ್ದು ಮಾಡುವಂತೆ ಸಾತಪ್ಪ ಕುಂಕೂರ ಆಗ್ರಹಿಸಿದರು.
ಸೇನಾ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ,ಶಂಕರಗೌಡ ಭಾವಿಕಟ್ಟಿ,ಸೌಮ್ಯ ನಾಯಕಿ,ಜೋತಿಬಾ ಹುಲಕೊಪ್ಪ,ಚನ್ನಬಸ್ಸು ಆಚಗೊಂಡ,ಗೀತಾ ಹಿರೇಮಠ,ಚನ್ನಮ್ಮ ಕೋಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
28/09/2020 01:32 pm