ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಚ್ಚ ಭಾರತ ಕನಸು ಕಂಡ ಮಹಾತ್ಮನ ಪುತ್ಥಳಿಗಿಲ್ಲ ದುರಸ್ತಿ ಭಾಗ್ಯ

ಹುಬ್ಬಳ್ಳಿ: ಮಹಾತ್ಮರ ಕಾರ್ಯವೈಕರಿಯ ಬಗ್ಗೆ ಅವರ ಜನ್ಮದಿನದಲ್ಲಿ ಮಾತ್ರ ನೆನಪಾಗುತ್ತದೆ. ಅಕ್ಟೋಬರ್-2 ಗಾಂಧೀಜಿಯವರ ಜಯಂತಿಗೆ ಮಾತ್ರ ಮಹಾತ್ಮ ಗಾಂಧೀಜಿಯವರು ನೆನಪಾಗುತ್ತದ್ದು,ಉಳಿದ ದಿನಗಳಲ್ಲಿ ಗಾಂಧೀಜಿಯವರ ಬಗ್ಗೆ ನೆನಪಂತೂ ಆಗುವುದೇ ಇಲ್ಲ ಎಂಬುವಂತಾಗಿದೆ.

ಹೌದು...ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಎದುರಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಕೆಯು ಅವ್ಯವಸ್ಥೆಯಿಂದ ಕೂಡಿದ್ದರೂ ಕೂಡ ಮಹಾನಗರ ಪಾಲಿಕೆ ಯಾವುದೇ ಕಾಮಗಾರಿಯಾಗಲಿ ದುರಸ್ತಿ ಕೆಲಸವಾಗಲಿ ಕೈಗೆತ್ತಿಕೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುತ್ಥಳಿಕೆಯ ಕಟ್ಟೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು,ಪುತ್ಥಳಿ ಆವರಣ ಸ್ವಚ್ಚತೆಯಿಂದ ವಂಚಿತವಾಗಿದೆ.ಇನ್ನೂ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಮಹಾನಗರ ಪಾಲಿಕೆಯ ಕಾರ್ಯವೈಖರಿಯನ್ನು ಅಣಕಿಸುವಂತಿದೆ.

ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಚ ಭಾರತ ಕನಸನ್ನು ಕಂಡಿರುವ ಮಹಾತ್ಮನ ಪುತ್ಥಳಿಯಲ್ಲಿಯೇ ಸ್ವಚ್ಚತೆ ಗಗನ ಕುಸುಮವಾಗಿದ್ದು,ಕೂಡಲೇ ಸೂಕ್ತ ಕ್ರಮಗಳನ್ನು ಜರುಗಿಸಿ ವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Nagesh Gaonkar
Kshetra Samachara

Kshetra Samachara

30/09/2020 11:23 am

Cinque Terre

15.17 K

Cinque Terre

0

ಸಂಬಂಧಿತ ಸುದ್ದಿ