ಹುಬ್ಬಳ್ಳಿ: ಕೊರೋನಾ ವೈರಸ್ ಬಂದಿದ್ದೆ ಬಂದಿದ್ದು ಎಲ್ಲ ವಲಯಗಳ ಮೇಲೂ ಕೊರೋನಾ ಎಪೆಕ್ಟ್ ಬೀರಿದೆ. ಲಾಕ್ ಡೌನ್ ನಿಂದ ಹಲವು ತಿಂಗಳುಗಳ ಕಾಲ ಬಂದ್ ಆಗಿದ್ದ ಕಾರ್ಖಾನೆಗಳು ಇದೀಗ ಮತ್ತೆ ಸ್ಥಗಿತಗೊಳ್ಳುತ್ತಿವೆ. ಕೈಗಾರಿಕೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಿದ್ರೆ ಆಸ್ಪತ್ರೆಗಳಿಗೆ ಆಕ್ಸಿಜನ್ ಇಲ್ಲ.. ಆಸ್ಪತ್ರೆಗಳಿಗೆ ಆಕ್ಸಿಜನ್ ಪೊರೈಕೆ ಮಾಡಿದ್ರೆ ಕೈಗಾರಿಕೆಗಳು ಸ್ಥಗಿತ ಎನ್ನುವಂತಾಗಿದೆ ನೋಡಿ..
ಹೌದು... ಕೈಗಾರಿಕೆಗಳ ಉತ್ಪಾದನಾ ಕಾರ್ಯಕ್ಕೆ ಇದೀಗ ಆಕ್ಸಿಜನ್ ಕೊರತೆ ಎದುರಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂರಾರು ಕಾರ್ಖಾನೆಗಳಿಗೆ ಆಕ್ಸಿಜನ್ ಕೊರತೆ ಎದುರಾದ ಪರಿಣಾಮ ವಾರದಲ್ಲಿ ಮೂರು ನಾಲ್ಕು ದಿನಗಳಷ್ಠೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಕೈಗಾರಿಕೆಗಳದ್ದಾಗಿದೆ. ಹೀಗಾಗಿ ಆಕ್ಸಿಜನ್ ಇಲ್ಲದೆ ಕೈಗಾರಿಕೆ ನಡೆಸೋದು ಕಷ್ಟ ಅಂತಿದ್ದಾರೆ ಕೈಗಾರಿಕೋದ್ಯಮಿಗಳು..
ಕೈಗಾರಿಕೆಗಳಲ್ಲಿ ವೆಲ್ಡಿಂಗ್,ಐರನ್ ಕಟಿಂಗ್ ಸೇರಿದಂತೆ ವಿವಿಧ ಕೈಗಾರಿಕಾ ಕಾರ್ಯಗಳಿಗೆ ಆಕ್ಸಿಜನ್ ಬೇಕೇ ಬೇಕು. ಆದರೆ ಅವಳಿನಗರದ ನೂರಾರು ಕಾರ್ಖಾನೆಗಳಿಗೆ ಸರಬರಾಜು ಆಗ್ತಿದ್ದ ಆಕ್ಸಿಜನ್ ಇದೀಗ ಸರಿಯಾಗಿ ಪೊರೈಕೆ ಆಗುತ್ತಿಲ್ಲ. ಹೀಗಾಗಿ ಬಿಡಿಭಾಗಗಳ ಉತ್ಪಾದನೆ. ನಿಗದಿತ ವೇಳೆಗೆ ಬೇಡಿಕೆಯಷ್ಟು ಉತ್ಪಾದನೆಗಳ ಸರಬರಾಜು ಮಾಡಲು ಕಾರ್ಖಾನೆಗಳಿಗೆ ಆಗ್ತಾ ಇಲ್ಲ. ಧಾರವಾಡ ಜಿಲ್ಲೆಯ ಎಲ್ಲ ಕೈಗಾರಿಕೆಗಳು ಹಾಗೂ ಆಸ್ಪತ್ರೆಗಳಿಗೆ ಬಳ್ಳಾರಿ ಹಾಗೂ ಮಹಾರಾಷ್ಟ್ರದಿಂದ ಆಕ್ಸಿಜನ್ ಸಿಲಿಂಡರ್ ಪೊರೈಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಬಳ್ಳಾರಿ ಮಹಾರಾಷ್ಟ್ರದಲ್ಲೂ ಕೋವಿಡ್ ರಣಕೇಕೆಯಿಂದ ಅಲ್ಲಿಂದ ಆಕ್ಸಿಜನ್ ಸಿಲೆಂಡರ್ ಗಳ
ಸರಬರಾಜು ನಿಗದಿತವಾಗಿ ಆಗದಿರುವುದರಿಂದ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೇ ಬಂದ್ ಆಗಬೇಕಾಗಿದೆ.
ಇದೀಗ ಕೈಗಾರಿಕೆಗಳಿಗೆ ಆಕ್ಸಿಜನ್ ದೊರೆಯದೆ ಮತ್ತೆ ಕೈಗಾರಿಕೆಗಳನ್ನ ಸ್ಥಗಿತ ಮಾಡಬೇಕಾದ ಪರಿಸ್ಥಿತಿ ಕೈಗಾರಿಕೋದ್ಯಮಿಗಳದ್ದಾಗಿದೆ. ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಬಂದ್ ಆಗುವಂತಾಗಿದ್ದು ಕೊರೋನಾ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ..
Kshetra Samachara
18/09/2020 04:43 pm