ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಾಳು ಬಿದ್ದ ಅಂಗನವಾಡಿ ಕೇಂದ್ರ ಉದ್ಘಾಟನೆ : ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ಕಲಘಟಗಿ: ಕಲಘಟಗಿ ತಾಲೂಕಿನ ಸಚ್ಚಿದಾನಂದ ನಗರದಲ್ಲಿ ಸುಮಾರು 7 ವರ್ಷಗಳಿಂದ ಅಂಗನವಾಡಿ ಕೇಂದ್ರ ಕಟ್ಟಡ ಇದ್ದು ಇಲ್ಲದಂತಾಗಿತ್ತು. ಮಳೆಗಾಲದಲ್ಲಿ ಅಂಗನವಾಡಿ ಇಲ್ಲದ ಕಾರಣ ಪಕ್ಕದ ಸೋರುವ ಶಾಲೆಯ ಕೊಠಡಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಿತ್ತು.

ಈ ದುಸ್ಥಿತಿಯ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಬಿತ್ತರಿಸಿತ್ತು. ಸದ್ಯ ನಮ್ಮ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ.

ನಮ್ಮ ವರದಿಯ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲವಂತ ಗೆವಡೆ ಸಹಕಾರ ನೀಡಿದ್ದರು. ಇನ್ನು ಇದೆಲ್ಲವನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳು ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದ ತಿಳಿಸಿದ್ದಾರೆ.

ವರದಿ: ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By : Nagesh Gaonkar
Kshetra Samachara

Kshetra Samachara

16/08/2022 07:50 pm

Cinque Terre

98.73 K

Cinque Terre

2

ಸಂಬಂಧಿತ ಸುದ್ದಿ