ಕುಂದಗೋಳ: ಇದು ಸಮಸ್ಯೆಯೋ ನಿತ್ಯ ಏರ್ಪಡುವ ಅವ್ಯವಸ್ಥೆಯೋ ಗೊತ್ತಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳ ಕಣ್ಣು ನಾಟುತ್ತಿಲ್ಲವೋ ಏನೋ ಗೊತ್ತಿಲ್ಲ. ಕುಂದಗೋಳ ಬಸ್ ನಿಲ್ದಾಣದಲ್ಲಿ ನಿತ್ಯ ಸಾರಿಗೆಗಾಗಿ ವಿದ್ಯಾರ್ಥಿಗಳು ಕಾಯುವ ಸ್ಥಿತಿಗೆ ಅಂತ್ಯ ಸಿಗುತ್ತಿಲ್ಲ.
ಸಾಮಾನ್ಯವಾಗಿ ಕುಂದಗೋಳ ಬಸ್ ನಿಲ್ದಾಣದಲ್ಲಿ ಕೊಡ್ಲಿವಾಡ, ಹಿರೇಗುಂಜಳ, ದೇವನೂರು, ತರ್ಲಘಟ್ಟ, ಯರೇಬೂದಿಹಾಳ ಸೇರಿದಂತೆ ಹಲವಾರು ಗ್ರಾಮಗಳಿಗೆ ಬಸ್ ವ್ಯವಸ್ಥೆ ಕೊರತೆ ಇದೆ. ಈ ಬಗ್ಗೆ ನಿತ್ಯ ವಿದ್ಯಾರ್ಥಿಗಳು ಸಾರಿಗೆ ನಿರ್ವಾಹಕರ ಜೊತೆ ವಾಗ್ವಾದ ಮಾಡಿ ತಮ್ಮ ಬಸ್ ಬಿಡುವಂತೆ ಹಠ ಸಾಧಿಸುವ ಸ್ಥಿತಿಗೆ ಉತ್ತರವೇ ಸಿಗದಾಗಿದೆ.
ಒಟ್ಟಾರೆ ಸಾರಿಗೆ ಸಮಸ್ಯೆ ಬೇಸತ್ತ ವಿದ್ಯಾರ್ಥಿಗಳು ಬಸ್ ಮುಂದೆ ಧರಣಿ ನಡೆಸಿ ಘೋಷಣೆ ಕೂಗುವ ಧ್ವನಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೆಲೆಯ ಇಲ್ಲದಾಗಿದೆ.
Kshetra Samachara
30/07/2022 08:00 am