ಕುಂದಗೋಳ: ತಾಲೂಕಿನ ಶಿರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರೊನಾ ಕಳೆದು ಆರಂಭವಾದ ಶುಭ ಘಳಿಗೆಯಲ್ಲಿ ಮತ್ತೆ ಅವ್ಯವಸ್ಥೆ ಶಾಪಕ್ಕೆ ಸಿಲುಕಿದೆ.
ಶಾಲೆಯ ಆವರಣದ ಸುತ್ತಲಿನ ಕಂಪೌಂಡ್ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತದಲ್ಲಿವೆ. ಶೌಚಾಲಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಸ್ವಚ್ಚ ಭಾರತ ಪರಿಕಲ್ಪನೆಯಲ್ಲೂ ಮಕ್ಕಳು ಅನಿವಾರ್ಯವಾಗಿ ಬಯಲನ್ನು ಆಶ್ರಯಿಸುವ ಸ್ಥಿತಿ ಒದಗಿದೆ. ಇನ್ನು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಾಟಲ್ ಇಲ್ಲವೆ ಮನೆ ಹೋಗಿ ದಾಹ ತೀರಿಸಿಕೊಳ್ಳುವ ಮಾರ್ಗಕ್ಕೆ ಮಕ್ಕಳಿಗೆ ಪರಿಹಾರ ದೊರಕಿಲ್ಲ.
ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾರ್ಜನೆ ಕೊಡಿಸಬೇಕಾದ ಪಾಲಕರು ನಮ್ಮ ಮಕ್ಕಳಿಗೆ ಶಾಲೆಗೆ ಹೋದ್ರೆ ಏನು ಅಪಾಯ ಕಾಯ್ದಿದೆ ಎನ್ನುವ ಭಯದಲ್ಲಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಿಸಿ ಶಾಲಾ ಕಾಂಪೌಂಡ್ ಗೋಡೆ ಹಾಗೂ ಶೌಚಾಲಯದ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Kshetra Samachara
27/01/2021 06:33 pm