ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಸ್ಥಿರ ಅಭಿವೃದ್ಧಿ ಗುರಿಯಿಂದ ಹಿಂದೆ ಉಳಿದ ಉತ್ತರ ಕರ್ನಾಟಕ!

ಬೆಂಗಳೂರು: 2030 ರೊಳಗೆ ಬಡತನ ಮುಕ್ತ ಗುರಿಯೊಂದಿಗಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಕರ್ನಾಟಕ 52 ಅಂಕಗಳನ್ನು ಪಡೆದುಕೊಂಡಿದ್ದು, ರಾಷ್ಟ್ರೀಯ ಸರಾಸರಿ ಹಾಗೂ ತಮಿಳುನಾಡಿಗಿಂತ ಕಡಿಮೆ ಅಂಕಗಳಿಸಿದೆ.

ರಾಷ್ಟ್ರೀಯ ಸರಾಸರಿ 54ರಷ್ಟಿದ್ದರೆ, ತಮಿಳುನಾಡು 76 ಅಂಕಗಳನ್ನು ಪಡೆದುಕೊಂಡಿದೆ.

ಆದಾಗ್ಯೂ, ಕರ್ನಾಟಕ ಒಟ್ಟಾರೇ, ಕಾರ್ಯದಕ್ಷತೆಯಲ್ಲಿ 52 ರಷ್ಟು ಪ್ರಗತಿ ಸಾಧಿಸಿದೆ.

ವಿಶೇಷ ಅಭಿವೃದ್ಧಿ ಯೋಜನೆಯ ಮೂಲಕ ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚನೆಗಾಗಿ ಉನ್ನತ ಮಟ್ಟದ ಸಮಿತಿ ವರದಿ ಹೇಳಿದರೂ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿರುವ ಸುಸ್ಥಿರ ಅಭಿವೃದ್ದಿ ಗುರಿಗಳ ಮುನ್ನೋಟ 2020ರ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಯಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಬಹು ಆಯಾಮದ ಬಡತನ ಸೂಚ್ಯಂಕ ವಿಶ್ಲೇಷಣೆಯಲ್ಲಿ ಯಾದಗಿರಿ ( 23.3) ರಾಯಚೂರು (17. 7) ಕಲಬುರಗಿ (14.2) ಕೊಪ್ಪಳ (13.7) ವಿಜಯಪುರ (13.5) ಗದಗ ಮತ್ತು ಬಳ್ಳಾರಿಯಲ್ಲಿ (13.1) ಅಂಕಗಳನ್ನು ಪಡೆದುಕೊಂಡಿವೆ.

2022 ಮತ್ತು 2030ರೊಳಗೆ ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುರಕ್ಷತ ಮೇಲೆ ಒಟ್ಟು ರಾಜ್ಯ ಉತ್ಪನ್ನದ 12.5 ರಷ್ಟನ್ನು ಸರ್ಕಾರ ವೆಚ್ಚ ಮಾಡಬೇಕು ಎಂದು ಯೋಜನಾ ಆಯೋಗ ಪ್ರಕಟಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಹಸಿವು ಮುಕ್ತ ಸೂಚ್ಯಂಕದಲ್ಲಿ ಕರ್ನಾಟಕ ಶೇ,54 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದು, ರಾಷ್ಟ್ರೀಯ ಸರಾಸರಿ 48ಗಿಂತ ಉತ್ತಮ ಪ್ರಗತಿ ಕಂಡುಬಂದಿದೆ.

Edited By : Nirmala Aralikatti
Kshetra Samachara

Kshetra Samachara

24/12/2020 03:29 pm

Cinque Terre

14.73 K

Cinque Terre

0

ಸಂಬಂಧಿತ ಸುದ್ದಿ