ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಿಸ್‌ಮಸ್‌, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ವಿಶೇಷ ರೈಲು ಅವಧಿ ವಿಸ್ತರಣೆ

ಹುಬ್ಬಳ್ಳಿ: ಕ್ರಿಸ್‌ಮಸ್‌, ಹೊಸವರ್ಷ ಮತ್ತು ಮಕರ ಸಂಕ್ರಾಂತಿ ಅಂಗವಾಗಿ ನೈರುತ್ಯ ರೈಲ್ವೆ ಆರಂಭಿಸಿರುವ ವಿಶೇಷ ರೈಲುಗಳ ಸಂಚಾರವನ್ನು ಇನ್ನು ಕೆಲ ದಿನಗಳ ಕಾಲ ಮುಂದುವರಿಸಿ ನೈಋತ್ಯ ರೈಲ್ವೆ ಇಲಾಖೆ ನಿರ್ಧಾರವನ್ನು ಕೈಗೊಂಡಿದೆ.

ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌ ಟರ್ಮಿನಸ್‌ (ಜ.30), ಲೋಕಮಾನ್ಯ ತಿಲಕ್‌ ಟರ್ಮಿನಸ್‌–ಹುಬ್ಬಳ್ಳಿ (ಜ.31), ಧಾರವಾಡ–ಮೈಸೂರು ಎಕ್ಸ್‌ಪ್ರೆಸ್‌ (ಜ.15), ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ (ಜ.16), ವಿಜಯವಾಡ–ಹುಬ್ಬಳ್ಳಿ (ಜ.19), ಹುಬ್ಬಳ್ಳಿ–ವಿಜಯವಾಡ (ಜ.20), ಹುಬ್ಬಳ್ಳಿ–ಸಿಕಂದರಾಬಾದ್‌ (ಜ.30), ಸಿಕಂದರಾಬಾದ್‌–ಹುಬ್ಬಳ್ಳಿ (ಜ.31), ಕೆಎಸ್‌ಆರ್‌ ಬೆಂಗಳೂರು–ಧಾರವಾಡ (ಜ.30), ಧಾರವಾಡ–ಕೆಎಸ್‌ಆರ್‌ ಬೆಂಗಳೂರು (ಜ.31), ಧಾರವಾಡ–ಸೊಲ್ಲಾಪುರ (ಜ.15), ಸೊಲ್ಲಾಪುರ–ಧಾರವಾಡ (ಜ.16), ಹುಬ್ಬಳ್ಳಿ–ಸೊಲ್ಲಾಪುರ (ಜ.15), ಸೊಲ್ಲಾಪುರ–ಹುಬ್ಬಳ್ಳಿ (ಜ.16), ಹುಬ್ಬಳ್ಳಿ–ಬಳ್ಳಾರಿ (ಜ.15), ಬಳ್ಳಾರಿ–ಹುಬ್ಬಳ್ಳಿ (ಜ.16)ರವರೆಗೆ ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ.

ಪ್ರತಿ ಶುಕ್ರವಾರ ಹುಬ್ಬಳ್ಳಿಯಿಂದ ವಾರಣಾಸಿಗೆ ತೆರಳುವ ರೈಲನ್ನು ಜ. 29ರ ವರೆಗೆ, ಪ್ರತಿ ಭಾನುವಾರ ವಾರಣಾಸಿಯಿಂದ–ಹುಬ್ಬಳ್ಳಿಗೆ ಬರುವ ರೈಲನ್ನು 30ರ ವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

18/12/2020 10:45 am

Cinque Terre

36.83 K

Cinque Terre

4

ಸಂಬಂಧಿತ ಸುದ್ದಿ