ಹುಬ್ಬಳ್ಳಿ: ಲಾಕ್ ಡೌನ್ ಕಾರಣದಿಂದಾಗಿ ಕಳೆದ 9 ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ - ಬೆಳಗಾವಿ ನಡುವೆ ತಡೆ ರಹಿತ ವೋಲ್ವೊ ಬಸ್ಸುಗಳ ಸಂಚಾರವನ್ನು ಸಾರ್ವಜನಿಕರ ಬೇಡಿಕೆಯ ಮೇರೆಗೆ ಮತ್ತೆ ಆರಂಭಿಸಲಾಗಿದೆ.
ಈ ಬಸ್ಸುಗಳು ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಸಂಚರಿಸುತ್ತವೆ ಎಂದು ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ನಿತ್ಯ ಬೆಳಿಗ್ಗೆ 8-30,9-00, 11-15 ಮಧ್ಯಾಹ್ನ 12-45, 3-00, 3-30 ಸಂಜೆ 5-30 ಮತ್ತು 6-00ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿ ಯಿಂದ ಏಕ ಕಾಲಕ್ಕೆ ಹೊರಡುತ್ತವೆ.
ಈ ಬಸ್ಸು ಗಳಿಗೆ ರಿಯಾಯಿತಿ ಪ್ರಯಾಣ ದರ ರೂ.150 ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ.
Kshetra Samachara
09/12/2020 05:41 pm