ಅಣ್ಣಿಗೇರಿ : ಸ್ವಾತಂತ್ರ್ಯ ಬಂದು 73 ವರ್ಷಗಳು ಕಳದ್ರೂ ಇಲ್ಲೊಂದು ಗ್ರಾಮದ ಜನ ಊರಿನಲ್ಲಿ ಕೆರೆ. ನಲ್ಲಿ ನಳಗಳ ನೀರಿನ ಸೌಕರ್ಯ ಇದ್ರೂ ಸಹ ಸಿಹಿ ನೀರಿನ ಪ್ರಭಾವದಿಂದಾಗಿ ಇಂದಿಗೂ ಬಾವಿ ನೀರನ್ನೆ ಸೇವಿಸುತ್ತಿದ್ದು ಬಾವಿ ರಕ್ಷಣೆಗೆ ಮೋರೆ ಇಟ್ಟಿದ್ದಾರೆ.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮಗಳ ಜನ್ರೇ ಇಂತಹ ಜೀವನ ಶೈಲಿಗೆ ಒಗ್ಗಿ ಕೊಂಡಿದ್ದು, ಊರಲ್ಲಿರೋ ಬಾವಿಯನ್ನು ಜೀರ್ಣೋದ್ಧಾರ ಮಾಡುವಂತೆ ಒತ್ತಾಯ ಮಾಡ್ತಾ ಇದ್ದಾರೆ. ಈಗ ಬಗ್ಗೆ ಅಲ್ಲಿನ ಗ್ರಾಮಸ್ಥರು ಮಾತೇನು ಕೇಳಿ.
ಕೇಳಿದ್ರಲ್ಲಾ, ಈ ಬಾವಿ ಪುರಾತನ ಕಾಲದಲ್ಲಿ ಹಳ್ಳಿಕೇರಿ ಗ್ರಾಮದಲ್ಲಿ ನಿರ್ಮಾಣವಾಗಿದ್ದು ಇಂದಿಗೂ ಸಹ ನೀರು ಬತ್ತಿಲ್ಲ. ಆದ್ರೆ ಈ ಬಾವಿಗೆ ಅಳವಡಿಸಿದ ಕಬ್ಬಿಣ ತುಕ್ಕು ಹಿಡಿದು ನೀರಲ್ಲಿ ಬಿಳ್ತಾ ಇದೆ. ಹಾಗೆ ತುಕ್ಕು ಹಿಡಿದರೋ ಕಬ್ಬಿನ ಬಾವಿಯೊಳಗೆ ಬೀಳುವ ಅಂಚಿನಲ್ಲಿ ಇದೆ. ಈ ಕಾರಣ ಅಪಾಯದ ಮುನ್ಸೂಚನೆ ಹೆಚ್ಚಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಾವಿಯನ್ನ ಅಭಿವೃದ್ಧಿ ಪಡಿಸಲು ಮಾಡಲು ಮೋರೆ ಇಟ್ಟಿದ್ದಾರೆ.
Kshetra Samachara
07/12/2020 04:07 pm