ಕುಂದಗೋಳ : ತಾಲೂಕಿನ ಯಲಿವಾಳ ಅರಳಿಕಟ್ಟಿ ಮಾರ್ಗದ ರಸ್ತೆ ತೀರಾ ಹಾಳಾಗಿದ್ದು, ಸತತ ಹತ್ತು ವರ್ಷಗಳಿಂದ ಈ ದುಸ್ಥಿತಿ ಬಗ್ಗೆ ಯಾವ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಈ ಕಾಮಗಾರಿ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದೆ.
ಈ ಕುರಿತು ಯಲಿವಾಳ ಅರಳಿಕಟ್ಟಿ ಮಾರ್ಗದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸುವಂತೆ ತಹಶೀಲ್ದಾರ ಬಸವರಾಜ ಮೆಳವಂಕಿ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳು ಪಂಚಾಯತ್ ರಾಜ್ ಅಭಿಯಂತರ ಉಪವಿಭಾಗದ ಅಧಿಕಾರಿಗಳಿಗೆ ಯುವಕರು ಮನವಿ ಸಲ್ಲಿಸಿ ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.
Kshetra Samachara
30/11/2020 01:18 pm