ನವಲಗುಂದ : ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಒಂದು ಶುದ್ಧ ನೀರಿನ ಘಟಕ ಇದೆ, ಆದ್ರೆ ಅದು ಇದ್ದು ಇಲ್ಲದಂತಿದೆ. ಯಾಕಂದ್ರೆ ಕಳೆದ ಹಲವು ತಿಂಗಳಿಂದ ಅಲ್ಲಿ ನೀರೇ ಬರುತ್ತಿಲ್ಲಾ, ಇದರಿಂದಾಗಿ ಬಸ್ ಪ್ರಯಾಣಿಕರು ಮತ್ತು ಸ್ಥಳೀಯರು ಪರದಾಟ ನಡೆಸುವಂತಾಗಿದೆ.
ಹೌದು ಪಟ್ಟಣದ ಜನಬೀಡಿತ ಪ್ರದೇಶದಲ್ಲಿರುವ ಈ ಶುದ್ಧ ನೀರಿನ ಘಟಕ ಬಂದ್ ಆಗಿದ್ದು, ಇಲ್ಲಿನ ಸ್ಥಳೀಯರಿಗೆ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಇನ್ನೂ ನೀರು ಬೇಕಾದಲ್ಲಿ ಮಾರುಕಟ್ಟೆಗೆ ಹೋಗಿ ತರಬೇಕಾದ ಪರಿಸ್ಥಿತಿ ಬಂದಿದೆ. ಈ ಸಮಸ್ಯೆಗೆ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಬೇಕಿದೆ...
Kshetra Samachara
20/11/2020 04:05 pm