ವರದಿ : ವಿನೋದ ಇಚ್ಚಂಗಿ
ನವಲಗುಂದ : ಕಾಲೇಜುಗಳು ಆರಂಭವಾದ್ರೂ ತರಗತಿಗೆ ಮಾತ್ರ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲಾ, ಇದು ಕೋವಿಡ್ ಭಯದಿಂದ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಾ ಇಲ್ಲಾ ಅನ್ನೋ ಹಾಗೂ ಇಲ್ಲಾ, ವಿದ್ಯಾರ್ಥಿಗಳಿಗೆ ಮತ್ತೊಂದು ಸಮಸ್ಯೆ ಅಂದ್ರೆ ಅದು ಬಸ್ ಪಾಸ್.
ಹೌದು ನವಲಗುಂದದಲ್ಲಿರುವ ಅನೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ರೀತಿಯ ಸಮಸ್ಯೆ ಆಗುತ್ತಿದ್ದು, ಶಂಕರ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ ಕೂಡ ಇದೆ ಆಗಿದೆ. ಬಹುತೇಕ ಇಲ್ಲಿ ಬರುವ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ, ಹೀಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಸ್ ಪಾಸ್ ಗಾಗಿ ಕಾಲೇಜಿನ ಸಿಬ್ಬಂದಿಗಳು ಡಿಪೋ ಗೆ ಹೋಗಿ ವಿಚಾರಿಸಿದರೆ ಇನ್ನೂ ನಮಗೆ ಸರ್ಕ್ಯುಲರ್ ಬಂದಿಲ್ಲಾ, ಬಂದ ನಂತರ ವ್ಯವಸ್ಥೆ ಮಾಡ್ತೀವಿ ಅಂತಾರೆ, ಆದ್ರೆ ಕೆಲವೊಂದು ಕಡೆ ಹಳೆ ಪಾಸ್ ತೋರಿಸಿದರೆ ಅನುಮತಿ ನಿಡ್ತಾರಂತೆ, ಆದ್ರೆ ಕಂಡಕ್ಟರ್ ಮಾತ್ರ ಇದನ್ನು ಒಪ್ಪುತ್ತಿಲ್ಲವಂತೆ, ವಿದ್ಯಾರ್ಥಿಗಳಿಗೆ ಕೇಳಿದರೆ, ದುಡ್ಡು ಕೊಟ್ಟೆ ಬಂದ್ವಿ ಅಂತಾರೆ ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ದುಡ್ಡು ಕೊಟ್ಟು ಬಸ್ ನಲ್ಲಿ ಬಂದ್ರು ಬಸ್ ನಲ್ಲಿ ಯಾರ್ಯಾರು ಎಲ್ಲೆಲ್ಲಿಂದ ಬರ್ತಾರೋ ನಮಗೆ ಭಯ ಆಗುತ್ತಿದೆ ಅಂತಾರೇ ವಿದ್ಯಾರ್ಥಿಗಳು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಕೊರೋನಾ ಭಯದ ಜೊತೆಗೆ ಬಸ್ ಪಾಸ್ ನ ಸಮಸ್ಯೆ ಕೂಡ ಹೆಚ್ಚಿರೋದ್ರಿಂದ ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗುತ್ತಿದ್ದಾರೆ ಅಂತಾರೆ ಶಂಕರ ಕಾಲೇಜಿನ ಪ್ರಾಚಾರ್ಯರಾದ ಡಾ. ಕಸ್ತೂರಿ ಪಿ ಬಿಕ್ಕಣ್ಣವರ...
ಈಗಾಗಲೇ ತರಗತಿಗಳು ತಡವಾಗಿ ಆರಂಭವಾಗುತ್ತಿದ್ದು, ಆದಷ್ಟು ಬೇಗ ಬಸ್ ಪಾಸ್ ನ ಸಮಸ್ಯೆಯನ್ನು ಸರ್ಕಾರ ಮುತುವರ್ಜಿ ವಹಿಸಿಕೊಂಡು ಮಕ್ಕಳಿಗೆ ಅನುಕೂಲವಾಗುವ ಹಾಗೇ ಕ್ರಮವನ್ನು ಕೈಗೊಳ್ಳಬೇಕಿದೆ.
Kshetra Samachara
20/11/2020 03:42 pm