ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜಲ್ಲಿ ಕಲ್ಲು ಹಾಕಿ ತಿಂಗಳುಗಳೇ ಕಳೆದರು ಆರಂಭವಾಗದ ರಸ್ತೆ ಕಾಮಗಾರಿ

ನವಲಗುಂದ : ನವಲಗುಂದ ಪಟ್ಟಣದ ಶಂಕರ ಕಾಲೇಜಿಗೆ ಹೋಗಬೇಕಾದ್ರೆ ಸರ್ಕಸ್ ಮಾಡೋ ಸನ್ನಿವೇಶ ಬಂದೊದಗುತ್ತೆ, ಅದು ಯಾಕೆ ಅಂದ್ರೆ ಕಾಲೇಜಿನ ರಸ್ತೆ ಅಷ್ಟೇ ಅಲ್ಲದೆ ಕಾಲೇಜಿನ ಆವರಣದ ರಸ್ತೆ ಸಹ ಸಂಪೂರ್ಣ ಹದಗೆಟ್ಟಿದ್ದು, ಈ ಸಮಸ್ಯೆಯತ್ತ ತಿರುಗಿ ನೋಡುವವರೇ ಇಲ್ಲದಂತಾಗಿ ಹೋಗಿದೆ.

ಕಳೆದ ಐದಾರು ತಿಂಗಳ ಹಿಂದೆಯೇ ಈ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿದ್ದರೂ ಕೂಡ ಇದುವರೆಗೂ ರಸ್ತೆ ಕಾಮಗಾರಿ ಆರಂಭಗೊಂಡಿಲ್ಲಾ, ಇದರಿಂದಾಗಿ ಈ ರಸ್ತೆಯಲ್ಲಿನ ಸ್ಥಳೀಯ ನಿವಾಸಿಗಳಿಗೂ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಇಲ್ಲಿನ ನಿವಾಸಿಗಳು ನಿಶ್ಚಿಂತೆಯಿಂದಿರಲು ಅನುವು ಮಾಡಿ ಕೊಡಬೇಕಿದೆ...

Edited By : Manjunath H D
Kshetra Samachara

Kshetra Samachara

19/11/2020 08:13 pm

Cinque Terre

28.46 K

Cinque Terre

0

ಸಂಬಂಧಿತ ಸುದ್ದಿ