ಅಣ್ಣಿಗೇರಿ : ಈ ಗ್ರಾಮ ಪಂಚಾಯಿತಿಗಳು ಸರ್ಕಾರದಿಂದ ಅನುದಾನ ಪಡೆದು ಶೌಚಾಲಯಗಳ ಕಟ್ಟಿಸಿ ಹಣ ಪಡೆದ್ರೆ ಮುಗಿತು, ಮರಳಿ ನಿರ್ವಹಣೆ ಕಡೆ ಗಮನವನ್ನೇ ನೀಡೋದಿಲ್ಲ ನೋಡಿ. ಈ ಪರಿಣಾಮ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರವಲಯದ ನಾಲ್ಕು ಸುಸಜ್ಜೀತ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗಿದ್ದು ಸಾರ್ವಜನಿಕರಿಗೆ ಬಯಲು ಮಲ, ಮೂತ್ರ ವಿಸರ್ಜನೆ ಖಾಯಂ ಆಗಿದೆ.
ಈ ಬಗ್ಗೆ ಅಣ್ಣಿಗೇರಿ ಗ್ರಾಮ ಪಂಚಾಯಿತಿಯ ಪಿಡಿಓಗೆ ಸಾರ್ವಜನಿಕರು ಶೌಚಾಲಯ ವ್ಯವಸ್ಥೆ ಸರಿಪಡಿಸಲು ಮನವಿ ಮಾಡಿ ಸುಸ್ತಾಗಿದ್ದು ಪರಿಹಾರ ಮಾತ್ರ ದೊರಕಿಲ್ಲ, ಹೀಗಾಗಿ ಗುತ್ತಿದಾರರ ಹೊಟ್ಟೆ ತುಂಬಿಸಲು ಶೌಚಾಲಯ ನಿರ್ಮಿಸಿ ಶೌಚಾಲಯಕ್ಕೆ ನೀರು ಸಹ ಬಿಡದೆ ಸುತ್ತಲೂ ಆಳೆತ್ತರಕ್ಕೆ ಕಸ ಬೆಳೆಯುವಂತೆ ಬೇಜವಾಬ್ದಾರಿ ಮೆರೆದ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದು, ಮೇಲಾಧಿಕಾರಿಗಳು ಗಮನಿಸುವಂತೆ ಒತ್ತಾಯ ಮಾಡಿದ್ದಾರೆ.
Kshetra Samachara
12/11/2020 01:10 pm