ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಂಡ ಪೋಕಿರಿಗಳ ಅಡ್ಡೆಯಾಗುತ್ತಿರುವ ನವಲಗುಂದದ ನಿಲಮ್ಮನ ಕೆರೆ

ನವಲಗುಂದ : ನವಲಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ನಿಲಮ್ಮನ ಕೆರೆಗೆ ದಶಕಗಳ ಇತಿಹಾಸವಿದೆ ಆದರೆ ಇಂತಹ ಕೆರೆ ಈಗ ಪುಂಡ ಪೋಕಿರಿಗಳ ಮದ್ಯಪಾನ ಅಡ್ಡೆಯಾಗಿ ಹೋಗಿದೆ.

ಹೌದು ನೀಲಮ್ಮ ಜಲಾಶಯ ನೀರನ್ನು ಈಗಲೂ ಸಹ ಇಲ್ಲಿನ ಜನರು ಕುಡಿಯಲು ಬಳಸುತ್ತಾರೆ ಆದರೆ ಇಂತಹ ಕೆರೆಯನ್ನು ಕುಡುಗರು ಈಗ ಹಾಳು ಮಾಡುತ್ತಿದ್ದಾರೆ. ಕೆರೆಯ ಸುತ್ತಲೂ ಎತ್ತ ನೋಡಿದರು ಕೇವಲ ಕುಡಿದು ಬಿಸಾಡಿದ ಮದ್ಯಪಾನ ಬಾಟಲಿ ಮತ್ತು ಪಾಕೀಟ್ ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಪುಂಡರು ಇಲ್ಲಿಯೇ ಕುಡಿದು ಗ್ಲಾಸ್ ಗಳನ್ನು ನೀರಲ್ಲಿ ಎಸೆದು ಬಿಡೋದ್ರಿಂದ, ಕುಡಿಯಲು ಯೋಗ್ಯವಾದ ನೀರನ್ನು ಕಲುಷಿತ ಮಾಡುತ್ತಿದ್ದಾರೆ. ಈ ಕೂಡಲೇ ಪುರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಆದಷ್ಟು ಬೇಗ ಕುಡಿಯಲು ಯೋಗ್ಯವಾದ ನೀರು ಕಲುಷಿತವಾಗೋದ್ರಲ್ಲಿ ಸಂಶಯವೇ ಇಲ್ಲಾ...

Edited By : Nagesh Gaonkar
Kshetra Samachara

Kshetra Samachara

10/11/2020 09:10 pm

Cinque Terre

43.11 K

Cinque Terre

5

ಸಂಬಂಧಿತ ಸುದ್ದಿ