ಧಾರವಾಡ : ಕೆಐಎಡಿಬಿ ಗಾಮನಗಟ್ಟಿ ಗ್ರೀನ್ ಟೆಕ್ ಪಾರ್ಕ್ ಉಳಿಸುವಂತೆ ಹಾಗೂ ಜಿಲ್ಲಾ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆಯುವಂತೆ ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ನಗರದ ಕೆಎಮ್ ಎಫ್ ಬಳಿಯಿರುವ ಲಕ್ಕಮ್ಮನಹಳ್ಳಿಯಲ್ಲಿನ ಕೆಐಎಡಿಬಿ ಕಚೇರಿ ಎದುರು ಧಾರವಾಡ ಅಮ್ ಆದ್ಮಿ ಪಕ್ಷ ಪ್ರತಿಭಟನಾ ಧರಣಿ ನಡೆಸಿದರು.
ಜಿಲ್ಲಾಧ್ಯಕ್ಷ ಸಂತೋಷ ನರಗುಂದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಧ್ವನಿಯಾಗಿ ಆಮ್ ಆದ್ಮಿ ಪಕ್ಷ ಗಾಮನಗಟ್ಟಿ ಗ್ರೀನ್ ಟೆಕ್ ಪಾರ್ಕ್ ಉಳಿಸಿ ( ಸೇವ್ ಗಾಮನಗಟ್ಟಿ ಗ್ರೀನ್ ಟೆಕ್ ಪಾರ್ಕ್ ) ಎಂಬ ಶೀರ್ಷಿಕೆಯಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.
Kshetra Samachara
07/11/2020 03:58 pm