ಹುಬ್ಬಳ್ಳಿ: ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆಯು ತುಂಬಿ ಹರಿದಿದ್ದು, ಕೆರೆಯ ಹೊರಗಿನ ಜಮೀನು ಜಲಾವೃತಗೊಂಡಿವೆ.
ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಜಲಪ್ರವಾಹದ ಮುನ್ಸೂಚನೆ ಕಾಣುತ್ತಿದ್ದು, ಈಗಾಗಲೇ ಉಣಕಲ್ ಕೆರೆಯು ತುಂಬಿ ಹರಿಯುವ ಮೂಲಕ ಕೋಡಿ ಬಿದ್ದು, ಬಹುತೇಕ ಜಮೀನು ಜಲಾವೃತಗೊಂಡಿವೆ.
ಧಾರವಾಡ ಜಿಲ್ಲೆಯಲ್ಲಿಯೇ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಉಣಕಲ್ ಕೆರೆಯಲ್ಲಿ ಈಗಾಗಲೇ ನೀರಿನ ಒಳ ಹರಿವು ಜಾಸ್ತಿಯಾಗಿದ್ದು, ಜನರು ಮತ್ತಷ್ಟು ಆತಂಕಗೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಇದೇ ರೀತಿಯಲ್ಲಿ ಮಳೆ ಮುಂದುವರೆದರೇ ಜನರ ಜೀವನ ಮತ್ತಷ್ಟು ಆತಂಕಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.
Kshetra Samachara
20/05/2022 09:21 pm