ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೃಷಿ ಚಟುವಟಿಕೆಗೆ ಅಡೆತಡೆ ಮಾಡ್ತಿವೆ ರಸ್ತೆಗೆ ವಾಲಿದ ವಿದ್ಯುತ್ ಕಂಬಗಳು

ಕುಂದಗೋಳ : ಪಟ್ಟಣ ಪಂಚಾಯಿತಿ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಪಟ್ಟಣದ ಅಮರಶಿವ ನಗರದ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಈ ಕುಂದಗೋಳ ಹುಬ್ಬಳ್ಳಿ ಒಳ ರಸ್ತೆಯ ಪಕ್ಕದಲ್ಲಿ ಅಳವಡಿಸಿದ ವಿದ್ಯುತ್ ಕಂಬಗಳು ನಿತ್ಯ ವಾಹನ ಸವಾರರಿಗೆ ಹಾಗೂ ಕೃಷಿ ಚಟುವಟಿಕೆಯ ಸಾಗಾಟಕ್ಕೆ ಅಪಾಯದ ಮುನ್ಸೂಚನೆ ನೀಡುತ್ತಲಿವೆ.

ಕುಂದಗೋಳ ಹುಬ್ಬಳ್ಳಿ ಸಂಪರ್ಕದ ರಸ್ತೆ ಪಕ್ಕ ರೈತರ ಹೊಲಗಳಿಗೆ ಹೊಂದಿಕೊಂಡು ನಿಲ್ಲಿಸಿರುವ ವಿದ್ಯುತ್ ಕಂಬಗಳು ರಸ್ತೆ ಕಡೆ ವಾಲುತ್ತಿವೆ. ಈ ಕಾರಣ ವಿದ್ಯುತ್ ಸಂಪರ್ಕಿಸುವ ಸರ್ವಿಸ್ ವೈರ್ ವಾಹನಗಳಿಗೆ ತಾಗುವ ಹಂತದಲ್ಲಿದೆ. ಇನ್ನು ಹೊಲಗಳಲ್ಲಿ ಹಾದು ಹೋಗಿರುವ ಕಂಬಗಳು ರೈತರ ಕೃಷಿ ಕಾಯಕಕ್ಕೆ ಅಡ್ಡಿಯಾಗಿವೆ.

ಸದ್ಯ ಈ ರಸ್ತೆ ಹೊಂದಿಕೊಂಡ ಹೊಲಗಳ ರೈತರು ಶೇಂಗಾ ಸೆದೆ, ಹತ್ತಿ ಚೀಲ, ಹಿಂಗಾರು ಬೆಳೆ ಗೋಧಿ ಹೊಟ್ಟು ಮೇವು ಹೀಗೆ ಹಲವಾರು ರೈತಾಪಿ ಚಟುವಟಿಕೆಗೆ ಟ್ರ್ಯಾಕ್ಟರ್ ನಲ್ಲಿ ಸರಕು ತರುವಾಗ ಅಪಾಯ ಎದುರಾಗುವ ಭೀತಿ ರೈತರನ್ನು ಕಾಡ್ತಾ ಇದೆ.

ಈಗಾಗಲೇ ರಸ್ತೆ ಕಡೆಗೆ ವಾಲಿರುವ ಕಂಬಗಳನ್ನು ಸಿಮೆಂಟ್ ಹಾಕಿ ಗಟ್ಟಿ ಮಾಡಿ ಸರ್ವಿಸ್ ವೈರ್ ಮೇಲಕ್ಕೆ ಎತ್ತರಿಸಿ ಎಂದು ರೈತರು‌ ಹೆಸ್ಕಾಂ ಇಲಾಖೆಗೆ ಮೋರೆ ಇಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

09/12/2020 01:08 pm

Cinque Terre

45.35 K

Cinque Terre

0

ಸಂಬಂಧಿತ ಸುದ್ದಿ