ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚಿಗರಿ 'ಗಾಲಿ'ಗೆ ಹತ್ತಿದ್ದು ಬೆಂಕಿ ಅಲ್ವಂತೆ

ಧಾರವಾಡ: ಧಾರವಾಡದ ಎಸ್‌ಡಿಎಂ ಬಳಿ ನಿನ್ನೆ ಚಿಗರಿ ಬಸ್ಸಿನ ಹಿಂಬದಿ ಚಕ್ರದಲ್ಲಿ ಕಾಣಿಸಿಕೊಂಡಿದ್ದು ಬೆಂಕಿ ಅಲ್ಲ ಎಂದು ಬಿಆರ್‌ಟಿಎಸ್ ಸಂಸ್ಥೆ ಸ್ಪಷ್ಟೀಕರಣ ಕೊಟ್ಟಿದೆ.

ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಸ್ಸು ಬರುತ್ತಿದ್ದ ಸಂದರ್ಭದಲ್ಲಿ ಬ್ರೆಕ್ ಲೈನರ್‌ಗಳಲ್ಲಿ ಸಣ್ಣ ತಾಂತ್ರಿಕ ದೋಷ ಕಂಡು ಬಂದು ಜಾಮ್ ಆಗಿತ್ತು. ಆದ್ದರಿಂದ ಬ್ರೆಕ್ ಡ್ರಮ್ಮಿಗೆ ಹೆಚ್ಚಿನ ಘರ್ಷಣೆಯಾಗಿ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಯಾದ ಚಾಲಕ ಅಗ್ನಿ ಅವಘಡ ಆಗಿದೆ ಎಂದು ವಾಹನದಲ್ಲಿದ್ದ ಅಗ್ನಿ ನಂದಕವನ್ನು ಉಪಯೋಗಿಸಿದ್ದಾರೆ. ಕೂಡಲೇ ಆ ವಾಹನವನ್ನು ಘಟಕಕ್ಕೆ ತರಿಸಿಕೊಂಡು ತಾಂತ್ರಿಕ ದೋಷ ಸರಿಪಡಿಸಲಾಗಿದೆ. ಆದರೆ, ಚಕ್ರದಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿರಲಿಲ್ಲ ಎಂದು ಬಿಆರ್‌ಟಿಎಸ್ ಸಂಸ್ಥೆ ಸ್ಪಷ್ಟೀಕರಣ ಕೊಟ್ಟಿದೆ.

Edited By : Nagaraj Tulugeri
Kshetra Samachara

Kshetra Samachara

31/12/2021 06:24 pm

Cinque Terre

47.05 K

Cinque Terre

0

ಸಂಬಂಧಿತ ಸುದ್ದಿ