ಧಾರವಾಡ : ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಯಾಗುತ್ತಿರುವ ಹುಬ್ಬಳ್ಳಿ ಧಾರವಾಡ ಮಧ್ಯೆ ಕಡಿಮೆ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ರೈಲ್ವೇ ಇಲಾಖೆ ದಾರಿ ಮಾಡಿದೆ.
ಹೌದು ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಸಂಚಾರದ ಅವಧಿ 20 ರಿಂದ 30 ನಿಮಿಷಕ್ಕೆ ಬರಲಿದೆ.
ಉಣಕಲ್-ಧಾರವಾಡ, ಹುಬ್ಬಳ್ಳಿ-ಉಣಕಲ್ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ.
ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿಯ ಭಾಗವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ.
ಉಣಕಲ್-ಧಾರವಾಡ 16 ಕಿ. ಮೀ. ಮಾರ್ಗದ ಕಾಮಗಾರಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಹುಬ್ಬಳ್ಳಿ-ಉಣಕಲ್ ನಡುವಿನ 3 ಕಿ. ಮೀ. ಮಾರ್ಗ ಜನವರಿಯಲ್ಲಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ.
ಧಾರವಾಡ-ಉಣಕಲ್ ನಡುವಿನ ಮಾರ್ಗದ ಕಾಮಗಾರಿಯನ್ನು 62.17 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ಈ ಮಾರ್ಗ ಪೂರ್ಣಗೊಂಡರೆ ಬೇರೆ ರೈಲುಗಳ ಕ್ರಾಸಿಂಗ್ ಗಾಗಿ ಧಾರವಾಡ ಅಥವಾ ಉಣಕಲ್ ನಲ್ಲಿ ಕಾಯಬೇಕಾದ ಅಗತ್ಯವಿಲ್ಲ.
ಜೋಡಿ ಹಳಿ ಮಾರ್ಗ ಪೂರ್ಣಗೊಂಡರೆ ಅವಳಿ ನಗರಗಳ ಮಧ್ಯೆ 20 ರಿಂದ 30 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ.
ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.
Kshetra Samachara
05/10/2020 08:51 am