ಹುಬ್ಬಳ್ಳಿ: ಶಾಲೆಯಲ್ಲಿ ಕಲಿತು ವಿದ್ಯಾವಂತರಾಗಿ, ಯಾವುದೋ ಒಂದು ಉದ್ಯೋಗಕ್ಕೆ ಸೇರಿಕೊಂಡು ಜೀವನ ನಡೆಸುತ್ತಾರೆ. ಶಾಲೆಯ ನೆನಪು ಮಾತ್ರ ಎನ್ನುವವರೆ ಹೆಚ್ಚು. ಅಂತಹದರಲ್ಲಿ ಇಲ್ಲೊಂದು ಶಾಲೆಯ ಹಳೇ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಂದವನ್ನು ಹೆಚ್ಚಿಸುತಿದ್ದಾರೆ.
ಶ್ರೀ ಸದ್ಗುರು ಸಿದ್ಧಾರೂಢರ ಹಳೆ ವಿದ್ಯಾರ್ಥಿಗಳ ಸಂಘದಿಂದ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಸರಕಾರಿ ಶಾಲೆಯಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಶ್ರೀ ಸದ್ಗುರು ಸಿದ್ಧಾರೂಢರ ಹಳೇ ವಿದ್ಯಾರ್ಥಿಗಳ ಸಂಘವು ನಿರಂತರವಾಗಿ ನಗರದಲ್ಲಿ ಸ್ವಚ್ಚತಾ ಅಭಿಯಾನ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸರಕಾರಿ ಶಾಲೆ ಸೇರಿದಂತೆ ರುದ್ರಭೂಮಿಗೂ ಸಹ ಅಂದವನ್ನು ಹೆಚ್ಚುಸಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಸ್ವಚ್ಚತಾ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ಶಾಲೆಗೆ ಬಣ್ಣ ಬಳೆದು ಮಕ್ಕಳ ಮುಖದಲ್ಲಿ ಸಂತಸ ಮೂಡಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಸಹ ನೀಡಿದ್ದು ಇವರ ಕಾರ್ಯನಿರಂತರವಾಗಿ ಸಾಗಲೆಂದು ಶುಭ ಕೋರಿದ್ದಾರೆ.
Kshetra Samachara
25/01/2022 02:44 pm