ಹುಬ್ಬಳ್ಳಿ: ನಗರದ ಗೋಕುಲ್ ರಸ್ತೆಯ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಎನ್.ಎಲ್.ಇ. ಸೊಸೈಟಿ.ಯ ಡಾ.ಆರ್.ಬಿ.ಪಾಟೀಲ್ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 9 ಮತ್ತು 10ನೇ ತರಗತಿಯ ಅಂತರಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ "ವಾರೀಧಿ-4.0" ಕಾರ್ಯಕ್ರಮವು ದಿನಾಂಕ 14-12-2024ರ ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.
ಈ ಅಂತರಶಾಲಾ ಸಾಂಸ್ಕೃತಿಕ ಕಾರ್ಯಕ್ರಮವು 8 ವಿಭಾಗಳನ್ನು ಒಳಗೊಂಡಿದೆ. 1) ವಿಜ್ಞಾನ ಮತ್ತು ಗಣಿತ ವಿಷಯ (A Science and Maths round) ಕ್ಕೆ ಸಂಬಂಧಿಸಿರುತ್ತದೆ. 2) ಕಲೆ ಮತ್ತು ಸೃಜನಶೀಲತೆ (An Art & Creativity Round) 3) ಅಗ್ನಿರಹಿತ ಅಡುಗೆ ತಯಾರಿಕೆ (A Cooking without fire Round) 4) ಆಂಗ್ಲ ಭಾಷೆಯ ಶಬ್ದ ಸಂಪತ್ತಿನ ಶ್ರೀಮಂತಿಕೆ (An English Language Round) 5) ៨ ក Round) 6) (A Singing Round) 7) (A Leadership (A Dance Round) 8) ಶಿಕ್ಷಕರಿಗಾಗಿ ಸೃಜನಾತ್ಮಕ ಚಟುವಟಿಕೆ (A Stress Buster Round for Accompanying Teacher) ಎಂಬ ವಿಷಯಗಳನ್ನು ಒಳಗೊಂಡಿದೆ. ಹುಬ್ಬಳ್ಳಿ, ಗದಗ ಹಾಗೂ ಸುತ್ತಮುತ್ತಲಿನ 9 ಮತ್ತು 10ನೇ ತರಗತಿಯ 50ಕ್ಕೂ ಹೆಚ್ಚು ಶಾಲೆಯ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ.
ಎನ್.ಎಲ್.ಇ. ಸೊಸೈಟಿ.ಯ ಚೇರಮನ್‌ರಾದ ಡಾ.ಪಿ.ವಿ.ದತ್ತಿ, ಗೌರವ ಕಾರ್ಯದರ್ಶಿ ಆರ್.ಎನ್.ಎನ್.ದೇಸಾಯಿಯವರು ಮತ್ತು ಜಂಟಿ ಕಾರ್ಯದರ್ಶಿ ಡಾ.ಬಿ.ಆರ್.ಪಾಟೀಲ್ ಇವರುಗಳ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
500 ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸುರ್ವಣ ಅವಕಾಶವೆಂದು ಭಾವಿಸಿಕೊಂಡು ಈ ವರ್ಷವೂ ಹೆಚ್ಚು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಪ್ರಾಚಾರ್ಯ ರಾಮ ಮೋಹನ್ ಎಚ್.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
12/12/2024 05:12 pm